ಸಮಯವಾದರೂ ಬಾರದ ಅಧಿಕಾರಿಗಳು,ಸಮರ್ಪಕವಾಗಿ ಪಾಲನೆಯಾಗದ ಆದೇಶ, ಮುಂಜಾನೆ 9.30ಗಂಟೆಗೆ ಆದರೂ ಬಾರದ ಅಧಿಕಾರಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಸರಕಾರಿ ನೌಕರರು, ಸಾರ್ವಜನಿಕರ ಅನುಕೂಲಕ್ಕಾಗಿ ಸರಕಾರಿ ಕಚೇರಿಗಳ ಕೆಲಸದ ವೇಳೆ ಬದಲಾದರೂ ಹಾಜರಾತಿ ಮಾತ್ರ ಕಡಿಮೆ.ಹೌದು, ತಾಲೂಕು ಸರಕಾರಿ ಕಚೇರಿಗಳಲ್ಲಿ ಏ.2 ರಿಂದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರ್ಯನಿರ್ವಹಣೆಗೆ ಸಮಯ ನಿಗದಿಪಡಿಸಲಾಗಿದೆ. ಆದರೆ ಹೊಸ ಸಮಯಕ್ಕೆ ಸರಕಾರಿ ನೌಕರರು ಇನ್ನೂ ಹೊಂದಿ ಕೊಂಡಿಲ್ಲ. ಕೆಲವು ಕಚೇರಿಗಳಲ್ಲಿ ಬೆಳಗ್ಗೆ ನೌಕರರು 9.30 ಆದರೂ ತೋಟಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿ ಕಾಣುವುದಿಲ್ಲ, ಸುರಪುರ ಟೈಮ್ಸ್ ವಾರ್ತೆ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ವಿಷಯ ಕಂಡುಬಂದಿದೆ.
ಬದಲಾಗದ ಮನೋಭಾವ: ರಾಜ್ಯ ಸರಕಾರ ಏ.2 ರಂದು ಬೆಳಗಾವಿ ಬಾಗಲಕೋಟೆ, ವಿಜಯಪುರ ಗುಲ್ಬರ್ಗ ಯಾದಗಿರಿ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಗಳ ವೇಳಾಪಟ್ಟಿ ಬದಲಾಯಿಸಿ ಆದೇಶ ಹೊರಡಿಸಿದೆ. ಈ ಮೊದಲು ಬೆಳಗ್ಗೆ 10.30 ರಿಂದ ಸಂಜೆ 5ರವರೆಗೆ ಇದ್ದ ಕಚೇರಿ ಅವಧಿಯನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ಬದಲಾಯಿಸಲಾಗಿದೆ. ಆದರೆ ಸುರಪುರ ತಾಲೂಕಿನ ಸಹಾಯಕ ತೋಟಗಾರಿಕೆ ಇಲಾಖೆಯಲ್ಲಿ ಮುಂಜಾನೆ 9.30 ಗಂಟೆಗೆ ಆದರೂ ಬಾಗಿಲು ಮುಚ್ಚಿರುವ ಯಾರು ಸಿಬ್ಬಂದಿ ಇರದೆ ಕಾರ್ಯಾಲಯ ಬಣಗೂಡುತ್ತಿತ್ತು.
ಸುಳ್ಳು ಮಾಹಿತಿ ನೀಡಿರುವ ಮೇಡಂವರ
ಸರಕಾರಿ ಕಚೇರಿಗಳ ಸಮಯ ಬದಲಾವಣೆ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನನುಕೂಲಕ್ಕೂ ಕಾರಣವಾಗಿದೆ. ಉದಾಹರಣೆಗೆ ಮುಂಜಾನೆ 9.30 ಗಂಟೆಯಾಗಿತ್ತು ಅಷ್ಟೊತ್ತು ಆದರೂ ಕಂಪ್ಯೂಟರ್ ಆಪರೇಟರ್ ಡಿ ದರ್ಜೆ ಸ ಸಿಬ್ಬಂದಿ ಬಿಟ್ಟರೆ ಯಾರೂ ಇರಲಿಲ್ಲ.ತೋಟಗಾರಿಕೆ ಸಹಾಯಕ ನಿರ್ದೇಶಕರಿಗೆ ಸಮಯ ಪಾಲನೆ ಬಗ್ಗೆ ಕೇಳಿದರೆ ಈಗಾಗಲೇ ಮುಂಜಾನೆ ಬಂದು ಹೋಗಿದ್ದೇನೆ ಹಂತ ಸುಳ್ಳು ಮಾಹಿತಿ ನೀಡಿದ್ದಾರೆ.
ತುರ್ತು ಸೇವೆ ಒದಗಿಸುವ ಪ್ರಮುಖ ಇಲಾಖೆ ಹೊರತುಪಡಿಸಿದರೆ ಇನ್ನಿತರ ಇಲಾಖೆಗಳಲ್ಲಿ ತಡವಾಗಿ ಕೆಲಸ ಶುರುವಾಗುತ್ತವೆ ಎಂಬ ಸಾರ್ವಜನಿಕರ ಆರೋಪವಾಗದೆ.
ಸಮಯ ಆದರೂ ಬರದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕ ಅಭಿಪ್ರಾಯವಾಗಿದೆ.
