ನಾಗರಾಳ ಗ್ರಾಮದಲ್ಲಿ ಈದ್ಗಾ ಮೈದಾನದ ಅಡಿಗಲ್ಲು

ಸುರಪುರ ಟೈಮ್ಸ್ ವಾರ್ತೆ
ಸುರಪುರ:ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಈದ್ಗಾ ಮೈದಾನ ಅಡಿಗಲ್ಲು ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು, ಸುರಪುರ ತಾಲೂಕಿನ ಮುಸ್ಲಿಂ ಸಮಾಜದ ಹಿರಿಯ ಮುಖಂಡರು ಹಾಗೂ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ನದೀಮುಲ್ಲಾ ಹುಸೇನಿ ಇನಾಮದಾರ ಇವರುಗಳ ಅಮೃತಾಸ್ಥದಿಂದ ಅಡಿಗಲ್ಲು ಸಮಾರಂಭ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಖಾಲಿದ ಅಹಮದ್ ತಾಳಿಕೋಟಿ, ಅಬ್ದುಲ್ ಗಫಾರ್ ನಗನೂರಿ, ಮುನ್ನವರ್ ಅರಿಕೇರಿ, ಲೀಯಾಕತ್ ಹುಸೇನ್ ಹುಸೇನ್ ಉಸ್ತಾದ್, ಮೈಬೂಬ್ ಒಂಟಿ, ಸುಬಾನ್ ಸಾಬ್ ಡಕ್ಕನ್, ಜನಾಬ್ ಖಾದರ್ ಸಾಬ್ ಲೈನ ಹಾಗೂ ನಾಗರಾಳ ಗ್ರಾಮದ ಎಲ್ಲಾ ಮುಸ್ಲಿಂ ಸಮಾಜದ ಮುಖಂಡರು ಸೇರಿದಂತೆ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.