ವಿದ್ಯುತ್ ಅವಘಡ: 70ಕ್ಕೂ ಹೆಚ್ಚು ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಶರಣು ಬಳಿ ಜಾಲಿಬೆಂಚಿ ಆಗ್ರಹ
ಸುರಪುರ ಟೈಮ್ಸ್ ವಾರ್ತೆ
ಸುರಪುರ :ತಾಲೂಕಿನಜಾಲಿಬೆಂಚಿ ಗ್ರಾಮದಲ್ಲಿಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲಿದಉಂಟಾಗಿದ್ದಬೆಂಕಿ ಅವಘಡದಲ್ಲಿ 70ಕ್ಕೂ ಹೆಚ್ಚು ಮನೆಗಳಿಗೆ ಹಾನಿಹಾಗೂಸುಮಾರು 40 ಲಕ್ಷರು.ಗಳನಷ್ಟ ಹಾನಿಯಾಗಿದು ಬೇಗನೆ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡಬೇಕೆಂದು ಶ್ರೀ ವಿಶ್ವಗುರು ಬಸವ ಸೇವಾ ಸಂಸ್ಥೆ ಸುರಪುರ ಅಧ್ಯಕ್ಷ ಶರಣು ಬಳಿ ಜಾಲಿಬೆಂಚಿ ಆಗ್ರಹಿಸಿದ್ದಾರೆ.
ಈಗಾಗಲೇ ವಿದ್ಯುತ್ ಸ್ಪರ್ಶದಿಂದ ಹಾನಿಯಾದಮನೆಗಳಿಗೆ ಭೇಟಿ ನೀಡಿದ ಅವರು, ಅಲ್ಲಾಗಿದ್ದ ಹಾನಿಯನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದ್ದಾರೆ. 30 -40 ವರ್ಷಗಳಿಗಿಂತ ಹಳೆಯದಾಗಿರುವ ವಿದ್ಯುತ್ ತಂತಿಗಳನ್ನು ಬದಲಾಯಿಸಿ ಕೂಡಲೇ ವಿದ್ಯುತ್ ಸಂಪರ್ಕ ಕೊಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು ಇದು ಕೂಡ ಬೇಗನೆ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.ವಿದ್ಯುತ್ ಅವಘಡದಿಂದ 70ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್ ಬ್ಯಾಟರಿಗಳು ಮತ್ತು ಫ್ಯಾನ್‌ಗಳಿಗೆ ಭಾರೀ ಹಾನಿಯಾಗಿದೆ. ಅಂದಾಜು
40 ಲಕ್ಷ ರು.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಹಾನಿಯ ಸರ್ವೇ ಕಾರ್ಯ ಆದಷ್ಟು ಬೇಗನೆ ಮುಗಿಸಿ ವರದಿ ನೀಡಬೇಕು. ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ತಲುಪಿಸಿ ಬೇಗನೆ ಪರಿಹಾರ ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
