ಸುರಪುರ ತಾಲೂಕಿನ ಹಂಚಿಕೆಯಾಗದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಾಮಗ್ರಿಗಳು
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಯಾದಗಿರಿ ಜಿಲ್ಲೆಯ ಸುರಪುರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವಿತರಿಸಬೇಕಾಗಿರುವ ಸಾಮಗ್ರಿಗಳನ್ನು ವಿತರಿಸದೆ ಅಧಿಕಾರಿಗಳು ಅಸಡ್ಡೆ ತೋರುದ್ದಿರುವುದು ವಿಪರ್ಯಾಸವೇ ಸರಿ.
ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸ್ವಾವಲಂಬಿ ಜೀವನ ನಡೆಸಲು ಮತ್ತು ಗ್ರಾಮೀಣ ಭಾಗಗಳಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳ ಮೂಲಕ ಅರ್ಹ ಫಲಾನುಭವಿಗಳ ಬಾಳಿಗೆ ಆಸರೆ ಆಗಬೇಕಾಗಿರುವ ಅಧಿಕಾರಿಗಳ ನಿರ್ಲಕ್ಷದಿಂದ ಸರ್ಕಾರದಿಂದ ಬಂದಿರುವ ಕಿಟ್ ಗಳು ಕೊಳೆತು ಹೋಗುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಳೆದ 2023 – 24 ನೇ ಸಾಲಿನಲ್ಲಿ ವಿತರಿಸಬೇಕಾಗಿದ್ದ ಸಾಮಗ್ರಿಗಳು ತುಕ್ಕು ಹಿಡಿದು ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಕೊಳೆತು ಹೋಗುತ್ತಿವೆ. ಇದರಿಂದ ಸರ್ಕಾರದ ಯೋಜನೆಗಳು ಹಳ್ಳ ಹಿಡಿದಂತಾಗಿದೆ. ಕೂಡಲೇ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸಾಮಗ್ರಿಗಳನ್ನು ವಿತರಿಸಿ ಸ್ವಂತವಾಗಿ ಉದ್ಯೋಗ ಮಾಡಿ ತನ್ನ ಕಾಲ ಮೇಲೆ ತಾನು ನಿಲ್ಲಲು ಸಹಕಾರ ನೀಡಬೇಕು.ಗ್ರಾಮೀಣ ಭಾಗದ ಉದ್ಯಮಿಗಳಿಗೆ ಹೆಚ್ಚು ಅನುಕೂಲಕರ ಹಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.



ಬಾಕ್ಸ
ಕೈಗಾರಿಕಾ ವಾಣಿಜ್ಯ ಇಲಾಖೆಯಿಂದ ಹಂಚಿಕೆಯಾಗದೆ ಉಳುದಿರುವ ಕೀಟ ಗಳನ್ನು ಆದಷ್ಟು ಬೇಗ ಹಂಚಿಕೆ ಮಾಡಬೇಕು ಮತ್ತು ಅರ್ಹ ಫಲಾನುಭವಿಗಳ ಲಿಸ್ಟ ಬಹಿರಂಗಗೊಳಿಸಬೇಕು ಇಲ್ಲವಾದಲ್ಲಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಲಾಗುವುದು.
ರಾಹುಲ ಹುಲಿಮನಿ ದಲಿತ ಮುಖಂಡರು ಸುರಪುರ