18ಕ್ಕೆ ಸುರಪುರ ನಗರದಲ್ಲಿ ಅಂಬೇಡ್ಕರ್ ಜಯಂತಿ ಅದ್ದೂರಿ ಆಚರಣೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ನಗರದ ಬಸ್ ನಿಲ್ದಾಣ ಹತ್ತಿರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಏ.18 ರಂದು ಡಾ.ಬಿ.ಆರ್.ಅಂಬೇಡ್ಕರ್‌ರವರ 134ನೇ ಜಯಂತ್ಯುತ್ಸವವನ್ನು ನಮ್ಮ ಹಿರಿಯರ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ, ಝಂಡದಕೇರಾದ ಗೌರವಾಧ್ಯಕ್ಷ ರಾಜು ಕಟ್ಟಿಮನಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.18 ರಂದು ಬೆಳಗ್ಗೆ 11 ಗಂಟೆಗೆ ಸಹಿಪ್ರಾ ಶಾಲಾ ಝಂಡದಕೇರಾದಿಂದ ಗೌತಮ ಬುದ್ದ ವೃತ್ತ, ಗಾಂಧೀಜಿ ವೃತ್ತದ ಮೂಲಕ ಅರಮನೆ ಮಾರ್ಗ ನಂತರ ಮಾರುಕಟ್ಟೆ ರಸ್ತೆ, ಬಸ್‌ಸ್ಟಾö್ಯಂಡ್ ಮಾರ್ಗದ ಮೂಲಕ ಅಂಬೇಡ್ಕರ್ ವೃತ್ತದವರೆಗೂ ಬಾಬಾ ಸಾಹೇಬರ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಸಂಜೆ 5 ಗಂಟೆಗೆ ಅಂಬೇಡ್ಕರ್ ಪುತ್ಥಳಿ ಮುಂದುಗಡೆ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಪೂಜ್ಯ ವರಜ್ಯೋತಿ ಬಂತೇಜಿ ಸಾನ್ನಿಧ್ಯ ವಹಿಸುವರು. ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ವಿಶೇಷ ಆಹ್ವಾನಿತರು. ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸುವರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವೈಜನಾಥ ಹೊಸಮನಿ ಅಧ್ಯಕ್ಷತೆ ವಹಿಸುವರು. ಜೇವರ್ಗಿಯ ಉಪನ್ಯಾಸಕ ಡಾ.ನಿಜಲಿಂಗ ದೊಡ್ಡಮನಿ, ಹೈಕೋರ್ಟ್ ನ್ಯಾಯವಾದಿ, ಹೋರಾಟಗಾರ್ತಿ ಭೀಮಪುತ್ರಿ ಸಾವಿತ್ರಿ ಉಪನ್ಯಾಸ ನೀಡುವರು. ತಹಸೀಲ್ದಾರ್ ಹೆಚ್.ಎ.ಸರಕಾವಸ್, ಡಿವೈಎಸ್‌ಪಿ ಜಾವೇದ್ ಇನಾಮದಾರ್, ಟಿಎಚ್‌ಒ ಡಾ.ಆರ್.ವಿ.ನಾಯಕ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಸಮಾಜ ಕಲ್ಯಾಣಾಧಿಕಾರಿ ಮೊಹ್ಮದ್ ಸಲೀಂ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ.
ಪ್ರಮುಖರಾದ ವೆಂಕೋಬ ಮಂಗಳೂರು, ಸುಗೂರೇಶ ವಾರದ, ತಿಪ್ಪಣ್ಣ ಸುರಪುರ, ಮಾನು ಗುರಿಕಾರ, ದುರ್ಗಪ್ಪ ಗೋಗಿಕರ, ಮಲ್ಲಿಕಾರ್ಜುನ ಕ್ರಾಂತಿ, ಮಾನಪ್ಪ ಕಟ್ಟಿಮನಿ, ಚಿನ್ನಪ್ಪ ಸುರಪುರಕರ, ಚಂದ್ರಶೇಖರ ಕಟ್ಟಿಮನಿ,ಶಂಕ್ರಪ್ಪ ಶಾಖನವರ, ಗುರುಪ್ಪ ಹುಲಿಕರ್,ಮೌನೇಶ್ವರ, ವೆಂಕಟೇಶ ಹೊಸಮನಿ, ಶಿವಕುಮಾರ ಕಟ್ಟಿಮನಿ, ಆದಪ್ಪ ಹೊಸಮನಿ, ಮಾನಪ್ಪ ಕರಡಕಲ್, ಭೀಮನಗೌಡ ಲಕ್ಷ್ಮಿ, ಮುರ್ತುಲಾ ಮುಲ್ಲಾ, ಕಾಳಪ್ಪ ಕವಾತಿ, ನಾಗಣ್ಣ ಕಲ್ಲದೇವನಹಳ್ಳಿ, ಆದಪ್ಪ ಸುರಪುರಕರ್, ಧರ್ಮಣ್ಣ ಹುಲಿಕಲ್, ಮರೆಪ್ಪ ಜೀವಣಗಿ, ನಾಗಣ್ಣ ಕಲ್ಲದೇವನಹಳ್ಳಿ, ರಾಹುಲ್ ಹುಲಿಮನಿ, ವೆಂಕಟೇಶ ಸುರಪುರ, ದಾನಪ್ಪ ಕಡಿಮನಿ, ಗೋಪಾಲ ತಳವಾರ, ಶಿವಲಿಂಗ ಹಸನಾಪುರ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವೈಜನಾಥ ಹೊಸಮನಿ, ಉಪಾಧ್ಯಕ್ಷ ಗಿರೀಶ ಶಾಖನವರ್, ಪ್ರಧಾನ ಕಾರ್ಯದರ್ಶಿ ಲಚಮಪ್ಪ ಸುರಪುರಕರ್, ಸಹ ಕಾರ್ಯದರ್ಶಿ ನಾಗಲಿಂಗ ಹುಲಿಕರ್, ಖಜಾಂಚಿ ಮನೋಹರ ಜೀವಣಗಿ, ವಿಕ್ರಮ ಕರಡಕಲ್, ಮಂಜುನಾಥ ಸುರಪುರಕರ್, ಗೋಪಾಲಕೃಷ್ಣ, ಶಿವಕುಮರ ಹುಲಿಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




ಪತ್ರಿಕಾಭವನದ ಸುದ್ದಿಗೋಷ್ಠಿಯಲ್ಲಿ ಸಮಿತಿ ಮುಖಂಡರ ಹೇಳಿಕೆ