ಸುರಪುರ : ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ಗುಡ್ ಫ್ರೈಡೇ ಆಚರಣೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ:ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಯೇಸು ಕ್ರಿಸ್ತ ಅವರನ್ನು ಶಿಲುಬೆಗೇರಿಸಿದ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೇ)ಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಗುಡ್ ಫ್ರೈಡೇ ಪ್ರಯುಕ್ತ ವಿಶೇಷ ಪ್ರಾರ್ಥನೆಗಳು, ಹಾಡುಗಳು ಹಾಗೂ ಭಕ್ತಿ ಪೂರ್ವಕವಾಗಿ ಆರಾಧನೆಗಳು ಜರುಗಿದವು. ಈ ಸಂದರ್ಭದಲ್ಲಿ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ನುಡಿದ ಸಪ್ತವಾಕ್ಯಗಳಾದ ‘ತಂದೆಯೇ ಅವರಿಗೆ ಕ್ಷಮಿಸು’ ಕುರಿತು ಸಾಮುವೇಲ್ ಮ್ಯಾಥ್ಯೂ , ‘ಈ ಹೊತ್ತೆ ನನ್ನ ಸಂಗಡ ಪರದೈಸಿನಲ್ಲಿರುವೆ’ ಕುರಿತು ಸೌಮ್ಯ ಸುಜಯ್ , ‘ಅಮ್ಮಾ ಇಗೋ ನಿನ್ನ ಮಗ ನಿನ್ನ ತಾಯಿ’ ಕುರಿತು ಸುಮತಿ ವಸಂತ, ‘ನನ್ನ ದೇವರೆ ಯಾಕೆ ನನ್ನ ಕೈ ಬಿಟ್ಟಿದ್ದಿ’ ಕುರಿತು ಸುನಿಲಾ ಶಾಂತಕುಮಾರ, ‘ನನಗೆ ನೀರಡಿಕೆಯಾಗಿದೆ’ ಕುರಿತು ಲಲಿತಾ ದೇವಪುತ್ರ, ‘ತೀರಿತು’ ಕುರಿತು ಕಸ್ತೂರಿ, ‘ತಂದೆಯೇ ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿ ಕೊಡುತ್ತೇನೆ’ ಕುರಿತು ರೆವರೆಂಡ್ ಪ್ರಕಾಶ್ ಹಂಚಿನಾಳ ಅವರು ದೈವ ಸಂದೇಶ ನೀಡಿದರು. ಈ ಆರಾಧನೆಯಲ್ಲಿ ರೆವರೆಂಡ್ ಸೈಮನ್ ಮಾರ್ಕ್, ವಸಂತಕುಮಾರ, ದೇವಪುತ್ರ, ಜಯಪ್ಪ,ಅಮಿತ್ ಪಾಲ್,ಧರ್ಮಣ್ಣ, ಮಾನುವೆಲರಾಜ್, ಸಿಮಿಯೋನ್, ರಮೇಶಪಾಲ್, ಇಮಾನುವೆಲ್, ಜಸ್ಟೀನ್ ಜಿಮ್ಮಿ,ಥಾಮಸ ಮ್ಯಾಥ್ಯೂ, ಸುಜಯಕುಮಾರ, ವಿಜಯಕುಮಾರ, ನವೀನ್, ಸನ್ನಿ, ಗಾಬ್ರಿಯೇಲ್, ಸೋನಾಸುಕುಮಾರಿ, ಸುಕುಮಾರಿ, ರತ್ನಮ್ಮ, ಸುಜಾತಾ, ಸಾಗರಿಕ, ಸುಜಾತ, ಅನಿತಾ,ಜೋವಿತಾ, ಶಾಲಿನಿ, ಸಂಗೀತ, ಶೋಭಾ,ಸುನೀತಾ, ಸ್ಟೆಲ್ಲಾ,ಸರಿತಾ,ರೆಬೆಕ್ಕಾ, ಶೋಭಾ ,ಪವಿತ್ರ,ಸೌಮ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

