ಪ್ರಧಾನ ಆವಾಸ್ ಯೋಜನೆಯಡಿ ಹಣ ವಸೂಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಬೇಸಿಗೆಯಲ್ಲಿ ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಜೀವನ ನಡೆಸಲು ಸಂಕಷ್ಟ ಪಡುತ್ತಿರುವುದನ್ನು ಅರಿತ ಸರ್ಕಾರ ಕೂಲಿ ದಿನಗಳು ಮತ್ತು ದಿನಗೂಲಿ ಮೊತ್ತವನ್ನು ಹೆಚ್ಚಳಗೊಳಿಸಿ ಅನುಕೂಲ ಕಲ್ಪಿಸಿದೆ ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಲಾಧಿಕಾರಿಗಳು ನರೇಗಾ ಕೂಲಿ ದುಡ್ಡು ಹಾಕಲು ಪ್ರತಿ ಕೂಲಿ ಕಾರ್ಮಿಕನಿಂದ 100 ರೂ ಹಣ ವಸಲಿ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದಿದೆ.
ಸುರಪುರ ತಾಲೂಕಿನ ಮಲ್ಲಾಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಂಪ್ಯೂಟರ್ ಆಪರೇಟರ್ ದುಡ್ಡಿನ ಬೇಡಿಕೆ ಕಾರ್ಮಿಕರ ಎನ್ಎಂಆರ್ ಜೀರೋ ಮಾಡಿದ್ದಾರೆಂದು ಕಾರ್ಮಿಕರು ದೂರಿದ್ದಾರೆ.
ಇನ್ನೂ ಮಲ್ಲಾ ಬಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮಂಜುರಾಗಿರುವ ಮನೆಗಳಿಗೆ ಜಿಪಿಎಸ್ ಮಾಡಲು ಸಾವಿರ ರೂಪಾಯಿಯಂತೆ ಪ್ರತಿಫಲಾನುಭವಿಗಳಿಂದ ಪಡೆದುಕೊಂಡು ಸುಮಾರು 2 ಲಕ್ಷ ರೂ ಅಕ್ರಮವಾಗಿ ಸಂಗ್ರಹಿಸಿದ್ದಾರೆ, ಇನ್ನು ಕೂಲಿ ಕಾರ್ಮಿಕರ ಜಾಬ್ ಕಾರ್ಡ್ ಮಾಡಲು 500 ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಕೂಡಲೇ ಕಂಪ್ಯೂಟರ್ ಆಪರೇಟರ್ ಮತ್ತು ಅಭಿವೃದ್ಧಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಗ್ರಾಮ ಘಟಕದ ಅಧ್ಯಕ್ಷ ರಾಯಪ್ಪಗೌಡ ಪೊಲೀಸ್ ಪಾಟೀಲ್, ಮುದುಕಪ್ಪ,ಯಂಕಮ್ಮ, ಬಸಮ್ಮ ,ದೇವಿಕಿ, ನಾಗಮ್ಮ ,ಸುಜಾತ, ಮೈಬುಬಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.



