ಉದ್ಯೋಗ ಖಾತ್ರಿ ಬೊಗಸ್ ಮತ್ತು ಜಾಬ್ ಕಾರ್ಡ ಬೊಗಸ್ ತನಿಖೆ ಮಾಡಲು ಆಗ್ರಹ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬೊಗಸಾಗಿದ್ದು ಮತ್ತು ಜಾಬ್ ಕಾರ್ಡಗಳು ಬೊಗಸಾಗಿದ್ದು ನಿಜವಾದ ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸ ಸಿಗುತ್ತಿಲ್ಲ ಎಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರಿ ತಿಳಿಸಿದ್ದಾರೆ. ಅವರು ಸುರಪುರ ನಗರ ತಹಸೀಲ್ದಾರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಿ ಮಾತನಾಡಿದ ಅವರು ಉದ್ಯೋಗ ಖಾತ್ರಿ ಜಾರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿದರೆ ಹಣ ಲೂಟಿ ಮಾಡಿದ್ದು ಬಯಲಿಗೆ ಬರುತ್ತದೆ ಈ ಬಗ್ಗೆ ಕೂಡಲೇ ತನಿಖೆ ಆದೇಶ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಲಕ ಮನವಿ ಮಾಡಿದರು.ಬೇಡಿಕೆ ಈಡೇರದ್ದರೆ ಮುಂದಿನ ದಿನಗಳಲ್ಲಿ ಯಾದಗಿರಿವರ ಕಛೇರಿಗೆ ಮುತ್ತಿಗೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಯಾದಗಿರಿಯ ರೈತ ಘಟಕದ ಜಿಲ್ಲಾ ಅಧ್ಯಕ್ಷ ಗೋಪಾಲ ಬಾಗಲಕೋಟ ರೈತ ಸಂಘ ಸು.ತಾ.ಅ.ಪಿಡ್ಡನಾಯಕ ,ತಾಲೂಕಾ ಅಧ್ಯಕ್ಷ ನಾಗತಾ ದರಬಾರ,ತ
ರೈತ ಘಟಕ ಸುರಪುರ ತಾಲೂಕಾ ಉಪಾಧ್ಯಕ್ಷ ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

