ಅಧಿಕಾರಿಗಳ ನಡೆಯನ್ನು ಖಂಡಿಸಿ ವಿಪ್ರಸಮಾಜದ ನಗರ ಘಟಕದ ವತಿಯಿಂದ ಪ್ರತಿಭಟಿಸಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ನಗರದ ತಹಸೀಲ್ದಾರ ಕಚೇರಿ ಎದುರು ಶನಿವಾರ ಕೆ.ಸಿ.ಇ.ಟಿ ಪರೀಕ್ಷಾ ಕೇಂದ್ರ ಅಧಿಕಾರಿಗಳ ನಡೆಯನ್ನು ಖಂಡಿಸಿ ವಿಪ್ರಸಮಾಜದ ನಗರ ಘಟಕದ ವತಿಯಿಂದ ಪ್ರತಿಭಟಿಸಿ ಮನವಿಯನ್ನು ಮುಖ್ಯಮಂತ್ತಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಡಾ.ಬಿ.ಸುಶಿಲಾ ಅವರಿಗೆ ಸಲ್ಲಿಸಿದರು.
ಈ ಸಮಯದಲ್ಲಿ ವಿಪ್ರ ಮುಖಂಡ ವಿ.ಎಸ್. ಜೋಶಿ ಮಾತನಾಡಿ,
ಕೆಲವು ದಿನಗಳ ಹಿಂದೆ ನಡೆದ ಕೆ.ಸಿ.ಇ.ಟಿ ಪರೀಕ್ಷೆ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ ನಗರಗಳ ಪರೀಕ್ಷ ಕೇಂದ್ರಗಳಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳನ್ನು ನಡೆಸಿಕೊಂಡ ರೀತಿ ಖಂಡನೀಯವಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಎಲ್ಲರಿಗೂ ತಮ್ಮ ತಮ್ಮ ಧಾರ್ಮಿಕತೆಯಿಂದ ಬದುಕುವ ಹಕ್ಕಿದೆ ಹೀಗಿರುವಾಗ ಪರೀಕ್ಷಾ ತಪಾಸಣೆ ನೆಪದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯಲು ತಿಳಿಸಿರುವುದು ಅಕ್ಷಮ್ಯ ಅಪರಾಧ ಇದರಿಂದ ಈಡಿ ಬ್ರಾಹ್ಮಣ ಸಮಾಜದ ಭಾವನೆಗೆ ಧಕ್ಕೆಯಾದೆ ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ವಿದ್ಯಾರ್ಥಿಗಳಿಗೆ ಪರಿಹಾರದ ಒದಗಿಸಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕಿತ್ತು ಹಾಕಿರುವ ಹಾಗೂ ತಪಾಸಣೆ ನೆಪದಲ್ಲಿ ಜನಿವಾರ ಇದ್ದುದರಿಂದ ಪರೀಕ್ಷಾ ಕೋಣೆಗೆ ಪ್ರವೇಶ ನಿರಾಕರಿಸಿರುವ ಎರಡೂ ಘಟನೆಗಳಿಂದ ಪರೀಕ್ಷೆ ಕೊಡಲು ಬಂದಿದ್ದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಆಘಾತ ಮೂಡಿಸಿದ್ದಲ್ಲದೆ ಈ ಘಟನೆಗಳಿಂದ ರಾಜ್ಯದ ಇಡೀ ಬ್ರಾಹ್ಮಣ ಸಮುದಾಯಕ್ಕೆ ಅವಮಾನಿಸಿದಂತಾಗಿದೆ, ಸಂವಿಧಾನ ಅಡಿ “ಎಲ್ಲರೂ ಸಮಾನರು” ಹಾಗೂ “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂದು ಹೇಳುವ ಸರ್ಕಾರ ಮತ್ತೊಂದು ಕಡೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಪರೀಕ್ಷಾ ಕೇಂದ್ರ ಸಿಬ್ಬಂದಿಗಳು ಇಂತಹ ಕೃತ್ಯವೆಸಗಿರುವುದು ಎದ್ದು ಕಾಣುತ್ತಿದ್ದು ಇದನ್ನು ತೀವ್ರವಾಗಿ ನಾವು ಖಂಡಿಸುತ್ತೇವೆ. ಎಂದರು
ಈ ಘಟನೆಗೆ ಕಾರಣೀಭೂತರಾದ ಎರಡೂ ಪರೀಕ್ಷಾ ಕೇಂದ್ರಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಕೂಡಲೆ ಅಮಾನತ್ತುಗೊಳಿಸಬೇಕು ಮತ್ತು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ವಿಪ್ರ ಸಮಾಜದ ಮುಖಂಡರಾದ ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ನಾರಾಯಣಾಚಾರ್ಯ ಐಜಿ, ದೇವದಾಸ್ ಭಟ್, ಮಲ್ಲಾರಾವ್ ಕುಲಕರ್ಣಿ ಸಿಂಧಿಗೇರಿ, ಕೃಷ್ಣಭಟ್ ಜೋಶಿ, ಕೆದಾರನಾಥ್ ಶಾಸ್ತ್ರಿ, ಭೀಮ್ ಭಟ್ ಜೋಶಿ, ಅಪ್ಪಣ್ಣ ಕುಲಕರ್ಣಿ, ವೆಂಕಟೇಶ್ ಭಕ್ರಿ, ಗಣೇಶ್ ಜಾಗ್ರದಾರ್, ನರಸಿಂಹರಾವ್ ಬಾಡ್ಯಾಳ್, ನರಸಿಂಹರಾವ್ ಬಡಶೇಶಿ, ಯಜ್ಞೇಶ್ವರ ಭಟ್, ರಮೇಶ ಕುಲಕರ್ಣಿ ಗೆದ್ದಲಮರಿ, ನರಸಿಂಹ ಭಂಡಿ, ಶಶಿಕಾಂತ ಜೋಶಿ, ವಿಜಯಕುಮಾರ್ ಕುಲಕರ್ಣಿ, ವಾದಿರಾಜ ಬುದೂರ್, ಗುರುನಾಥ್ ರಾವ್ ಕುಲಕರ್ಣಿ, ಬಲಭೀಮರಾವ್ ಕುಲಕರ್ಣಿ ಸೇರಿದಂತೆ ಇತರರಿದ್ದರು.


