ನಾಳೆ ನಗನೂರು ಗ್ರಾಮದ ಶ್ರೀ ಶರಣಬಸವೇಶ್ವರ 178ನೇ ಜಾತ್ರಾ ಮಹೋತ್ಸವ, 23ನೇ ವರ್ಷದ ಸರಳ ಸಾಮೂಹಿಕ ವಿವಾಹ,ಧರ್ಮಸಭೆ

ಸುರಪುರ ಟೈಮ್ಸ್ ವಾರ್ತೆ
ಕೆಂಭಾವಿ:ಪಟ್ಟಣದ ಸಮೀಪ ನಗನೂರು ಗ್ರಾಮದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ 178ನೇ ಜಾತ್ರಾ ಮಹೋತ್ಸವ ನಿಮಿತ್ತ 23 ನೇ ವರ್ಷದ ಸರಳ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಜಂಗಮ ಗಣಾರಾಧನೆಯ ನಿಮಿತ್ತ ಧರ್ಮಸಭೆಯನ್ನು ಏ.22ಮಂಗಳವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀ ಶರಣಪ್ಪ ಶರಣರು ತಿಳಿಸಿದ್ದಾರೆ.
ಮಂಗಳವಾರದಂದು ನಡೆಯುವ ಧರ್ಮಸಭೆಯ ಸಾನಿಧ್ಯವನ್ನು ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯರು, ಷ.ಬ್ರ. ಸೂಗೂರೇಶ್ವರ ಶಿವಾಚಾರ್ಯರು, ಮ.ನಿ.ಪ್ರ. ಗುರುಲಿಂಗ ದೇವರು, ಪೂಜ್ಯ ಶ್ರೀ ಬಸವಯ್ಯಸ್ವಾಮಿಗಳು, ವೇ. ಬಸವರಾಜ ಸ್ವಾಮಿಗಳು ಸ್ಥಾವರಮಠ, ವೇ. ಅಮರಯ್ಯಸ್ವಾಮಿ ಜಾಲಿಬೆಂಚಿ, ಪೂಜ್ಯ ಶ್ರೀ ಖಂಡಪ್ಪ ತಾತಾ, ಪೂಜ್ಯ ಶ್ರೀ ದೊಡ್ಡಪ್ಪ ತಾತಾ ವಹಿಸಿಕೊಳ್ಳುವರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ನೆರವೇರಿಸುವರು. ಶಾಸಕ ಅಲ್ಲಮಪ್ರಭು ಪಾಟೀಲ, ರಾಜಾ ವೇಣುಗೋಪಾಲ ನಾಯಕ, ಮುಖಂಡರಾದ ಗುರುಪಾಟೀಲ ಶಿರವಾಳ, ಅಮೀನರೆಡ್ಡಿ ಪಾಟೀಲ ಯಾಳಗಿ, ಡಾ|| ಶಂಕ್ರಣ್ಣ ಎಲ್. ವಣಿಕ್ಯಾಳ ಕುಲ ಸಚಿವರು ರಾಯಚೂರ ವಿಶ್ವವಿದ್ಯಾಲಯ, ದೇವಿಂದ್ರಪ್ಪಗೌಡ ಗೌಡಗೇರಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪೋಟೊ ;ದೀಪಾಲಂಕೃತಗೊಂಡ ನಗನೂರ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನ.