ಮುಂಜಾನೆ 9.10ಗಂಟೆಗೆ  ಆದರೂ ತಹಸೀಲ್ದಾರ ಕಚೇರಿಗೆ ಬಾರದ ಸಿಬ್ಬಂದಿ,ಸಮರ್ಪಕವಾಗಿ ಪಾಲನೆಯಾಗದ ಆದೇಶ.

ಸುರಪುರ ಟೈಮ್ಸ್ ವಾರ್ತೆ

ಸಮಯ ಆದರೂ ಕಚೇರಿಗೆ ಬರದ ಅಧಿಕಾರಿಗಳು…..
ಸುರಪುರ:ಸರಕಾರಿ ನೌಕರರು, ಸಾರ್ವಜನಿಕರ ಅನುಕೂಲಕ್ಕಾಗಿ ಸರಕಾರಿ ಕಚೇರಿಗಳ ಕೆಲಸದ ವೇಳೆ ಬದಲಾದರೂ ಹಾಜರಾತಿ ಮಾತ್ರ ಕಡಿಮೆ.ಹೌದು, ತಾಲೂಕು ಸರಕಾರಿ ಕಚೇರಿಗಳಲ್ಲಿ ಏ.2 ರಿಂದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರ್ಯನಿರ್ವಹಣೆಗೆ ಸಮಯ ನಿಗದಿಪಡಿಸಲಾಗಿದೆ. ಆದರೆ ಹೊಸ ಸಮಯಕ್ಕೆ ಸರಕಾರಿ ನೌಕರರು ಇನ್ನೂ ಹೊಂದಿ ಕೊಂಡಿಲ್ಲ. ಕೆಲವು ಕಚೇರಿಗಳಲ್ಲಿ ಬೆಳಗ್ಗೆ ನೌಕರರು 9.10ಕಾಣುವುದಿಲ್ಲ, ಸುರಪುರ ಟೈಮ್ಸ್ ವಾರ್ತೆ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ವಿಷಯ ಕಂಡುಬಂದಿದೆ.

ಬದಲಾಗದ ಮನೋಭಾವ: ರಾಜ್ಯ ಸರಕಾರ ಏ.2 ರಂದು ಬೆಳಗಾವಿ ಬಾಗಲಕೋಟೆ, ವಿಜಯಪುರ ಗುಲ್ಬರ್ಗ ಯಾದಗಿರಿ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಗಳ ವೇಳಾಪಟ್ಟಿ ಬದಲಾಯಿಸಿ ಆದೇಶ ಹೊರಡಿಸಿದೆ. ಈ ಮೊದಲು ಬೆಳಗ್ಗೆ 10.30 ರಿಂದ ಸಂಜೆ 5ರವರೆಗೆ ಇದ್ದ ಕಚೇರಿ ಅವಧಿಯನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ಬದಲಾಯಿಸಲಾಗಿದೆ. ಆದರೆ ಸುರಪುರ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ಕಾರ್ಯಲಯದ ಸಿಬ್ಬಂದಿ 9.10ಗಂಟೆಗೆ ಆದರೂ ಕೆಲಸಕ್ಕೆ ಬಾರದೇ ಅಸಡ್ಯ ತೋರಿದ್ದಾರೆ
ತಾಲೂಕಿನ ನಾನಾ ಭಾಗಗಳ ಸರಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಗಮನಿಸಿದಾಗ ಶೇ.60 ರಷ್ಟು ನೌಕರರು ಮಾತ್ರ ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಿದ್ದಾರೆ.

ಸಿಬ್ಬಂದಿಗಳ ಭೇಟಿ ಕಷ್ಟ
ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನನುಕೂಲಕ್ಕೂ ಕಾರಣವಾಗಿದೆ. ಉದಾಹರಣೆಗೆ  ತಹಸೀಲ್ದಾರ ಬಂದಾಗ 9.10ಗಂಟೆಯಾಗಿತ್ತು ಅಷ್ಟೊತ್ತಿಗೆ ಕಚೇರಿ ಯಾರು ಬರದ ಕಾರಣ ಅವರ ಬರುವರೆಗೂ ಕಾಯುವ ಪರಿಸ್ಥಿತಿ ಬಂದೊಂದಗಿದೆ ಮಲ್ಲಿಕಾರ್ಜುನ ತಮ್ಮ ಆಳಲು ತೊಡೆದುಕೊಂಡರು.
ಸಮಯ ಆದರೂ ಬಾರದ ಸಿಬ್ಬಂದಿಗಳ ಅಧಿಕಾರಿಗಳ ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!