ವಕ್ಫ್ ಬಿಲ್ ಕಾಯ್ದೆ ತಿದ್ದುಪಡೆ ವಿರೋಧಿಸಿ ಮುಸ್ಲಿಂ ಸಮುದಾಯದ ಒಕ್ಕೂಟದಿಂದ ಏ. 25 ಪ್ರತಿಭಟನಾ ರ್ಯಾಲಿ

ಸುರಪುರ ಟೈಮ್ಸ್ ವಾರ್ತೆ

ಸುರಪುರ: 2025 ರ ವಕ್ಫ್ ಬಿಲ್ ಕಾಯ್ದೆ ತಿದ್ದುಪಡಿಯು ಮುಸ್ಲಿಂ ಸಮುದಾಯದ ಜನಾಂಗಕ್ಕೆ ಯಾವುದೇ ಪ್ರಯೋಜನಕ್ಕೆ ಬಾರದ ಹಾಗೂ ಇನ್ನೀತರ ಧರ್ಮೀಯರನ್ನಾ ವಕ್ಫ್ ಮಂಡಳಿಯಲ್ಲಿ ಸೇರ್ಪಡೆ ವಿರೋಧಿಸಿ ಸುರಪುರ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಸುರಪುರ ತಾಲೂಕು ಮುಸ್ಲಿಂ ಸಮುದಾಯದ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ರ್ಯಾಲಿ ಯನ್ನು ಇದೇ 25ನೇ ರಂದು ಮಧ್ಯಾಹ್ನ 2:30ಕ್ಕೆ ಟಿಪ್ಪು ಚೌಕದಿಂದ ಪ್ರಾರಂಭವಾಗಿ ಅಂಬೇಡ್ಕರ್ ವೃತ್ತ ಗಾಂಧಿ ಚೌಕಿನಲ್ಲಿ ಪ್ರತಿಭಟನೆ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಸ್ಲಿಂ ಸಮುದಾಯದ ಒಕ್ಕೂಟದ ಮುಂಖಡ ಅಹ್ಮದ್ ಪಠಾನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರ ಸಭೆಯ ಮಾಜಿ ಅಧ್ಯಕ್ಷ ಅಬ್ದುಲ್ ಗಫರ್ ನಗನೂರಿ ಮಾತನಾಡುತ್ತಾ ವಕ್ಫ್ ಮಂಡಳಿಯಲ್ಲಿ ಮುಸ್ಲಿಂ ಸಮುದಾಯದಲ್ಲಿರುವ ಬಡವ & ಶ್ರೀಮಂತ ಎಂದು ಯಾವ ಭೇದ ಭಾವವಿಲ್ಲದೆ ಎಲ್ಲರೂ ಸಹಬಾಳ್ವೆಯಿಂದ ಬಾಳಲು ಶತ ಶತಮಾನಗಳಿಂದ ಧರ್ಮಕಾರ್ಯಗಳಲ್ಲಿ ಹಾಗೂ ಆಚರಣೆಗಳಲ್ಲಿ ಅನುಕೂಲವಾಗಲೆಂದು ಈ ಒಂದು ವಕ್ಫ್ ಮಂಡಳಿಯನ್ನು ಜಾರಿಗೆ ತರಲಾಗಿದೆ ಎಂದರು.
ಈ ಹಿಂದೆ ಇರುವ ವಕ್ಫ್ ಮಂಡಳಿಯನ್ನೆ ಮುಂದುವರೆಸಿಕೊಂಡು ಹೋಗುವವರೆಗು ನಮ್ಮ ಹೋರಾಟ ಮುಂದುವರಿಯುತ್ತದೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಒಕ್ಕೂಟದ ಮುಖಂಡರಾದ ತಾಲೂಕು ಮುಸ್ಲಿಂ ಸಮುದಾಯದ ಒಕ್ಕೂಟದಖಾಜಾ ಖಲೀಲ ಅಹಮ್ಮದ ಅರಕರಿ,
ಖಾಲಿದ್ ಖಾಲಿದ್ ಅಹೆಮ್ಮದ ತಾಳಿಕೋಟಿ, ಅಬ್ದುಲ್ ಮಜೀದ,
ಶೇಖ್ ಮಹೆಬೂಬ್ ಒಂಟಿ,ಶೇಖ್ ಲಿಯಖತ್ ಹುಸೇನ್ ಉಸ್ತಾದ್ ,ಮಹಮ್ಮದ ಇಕ್ಕಿಯಾಕ್ ಹುಸೇನ ಸವಾರ, ಅಬ್ದುಲ ಆಲೀಮ ಗೋಗಿ,ಶಕೀಲ ಅಹಮ್ಮದ ಖುರೇಶಿ,ಅಬೀದ್ ಹುಸೇನ ಪಗಡಿ,ಮಹಮ್ಮದ ರಿಯಾಜ ಇಲಕಲ್, ಮಹ್ಮದ್ ಖಮರುದ್ದೀನ್, ನಾಸಿಕ ಪ್ರಸ್‌ನ ಹಂಡಾಲೆ,ಮಾಯ್ಯದ್ ಇದ್ರೀಸ್ ದಖನಿ, ಸೈಯದ್ ಖಕ್ತಿಯಾರ ಅಹ್ಮದ್, ಮಹ್ಮದ್ ಜಾಫರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!