ಏ15ರ ವರೆಗೆ ಕಾಲುವೆಗೆ ನೀರು ಹರಿಸಲು ಶಾಸಕ ಆರ್ ವಿ ಎನ್ ಮನವಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ ; ನಾರಾಯಣಪೂರ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಕಳೆದಾ ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯಗಳು ಕೈಗೊಂಡಂತೆ ಮಾರ್ಚ್ 23ರ ವರಿಗೆ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತಿದೆ.
ಆದರೆ ಪ್ರಸ್ತುತ ಕಾರಣಾಂತರಗಳಿಂದ ಕೃಷ್ಣ ಅಚ್ಚುಕಟ್ಟ ಪ್ರದೇಶದ ರೈತರು ಬೆಳೆಗಳನ್ನು ನಾಟಿಮಾಡುವುದು ತಡವಾಗಿರುತ್ತದೆ. ಹೀಗಾಗಿ ಸದರಿ ದಿನಾಂಕದವರೆಗೆ ನೀರು ಹರಿಸುವುದು ನಿಲ್ಲಿಸಿದರೆ ರೈತರ ಬೆಳೆಗಳು ಫಲ ನೀಡುವುದಿಲ್ಲಾ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಏ 15ವರೆಗೆ ಕಾಲುವೆಗಳಿಗೆ ನೀರು ಹರಿಸಿದರೆ ರೈತರ ನೀರಿನ ಭವಣೆಯನ್ನು ನಿಗಿಸಿದಂತಾಗುತ್ತದೆ. ಆದ್ದರಿಂದ ತಾವುಗಳು, ಮುಖ್ಯ ಮಂತ್ರಿ ಮತ್ತು ಉಪಮುಖ್ಯಮಂತ್ರಿಹಾಗೂ ಜಲ ಸಂಪನ್ಮೂಲ ಸಚಿವರಿಗೆ ರೈತರ ಸಮಸ್ಯೆ ಬಗ್ಗೆ ಗಮನ ಸೆಳೆದು ಕಾಲುವೆಗೆ ಏ15ವರೆಗೆ ನೀರು ಹರಿಸಲು ಸಂಬಂದಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಆದೇಶಿಸುವಂತೆ ಮನವರಿಕೆ ಮಾಡಬೇಕು ಎಂದು ಭೀಮರಾಯನಗುಡಿ
ಕೃಷ್ಣಾ ಕಾಡಾ ನೀರು ಬಳಕೇದಾರ ಸಹಕಾರ ಸಂಘದಿಂದ ಶಾಸಕ ರಾಜಾ ವೇಣುಗೋಪಾಲ ನಾಯಕ ಮನವಿ ಮಾಡಿದರು. ಈ ಸಂದರ್ಭದಲ್ಲಿ ಡೇವಿಡ್ ಸಾಹುಕಾರ, ಗಂಗಾಧರ ಕುಂಬಾರ ,ಹಣಮಂತ್ರಾಯ ಕವಡಿಮಟ್ಟಿ,
ಸೈಯದಸಾಬ ತಾಳಿಕೋಟಿ, ಮಲ್ಲಣ್ಣ ರಾಂಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!