ಏ.15 ರವರೆಗೆ ಕಾಲುವೆಗೆ ನೀರು ಹರಿಸಿ; ಮಲ್ಲಿಕಾರ್ಜುನ ಸತ್ಯಂಪೇಟೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಏ.6 ರವರೆಗೆ ನೀರು ಹರಿಸುವ ಕುರಿತು ನೀರಾವರಿ ಸಲಹಾ ಸಮಿತಿ ಕೈಗೊಂಡಿರುವ ನಿರ್ಧಾರ ಅವೈಜ್ಞಾನಿಕವಾಗಿದೆ. ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಏ.15 ರವರೆಗೆ ನಿರಂತರವಾಗಿ ಕಾಲುವಗಳಿಗೆ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರಿಗೆ ಪತ್ರ ಬರೆದಿರುವ ಅವರು,ಬೆಂಗಳೂರಿನಲ್ಲಿ ನಡೆದ ಸಭೆಗೆ ರೈತರನ್ನು ಆಹ್ವಾನಿಸದೆ ಕೇವಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ತೆಗೆದುಕೊಂಡಿರುವ ನಿರ್ಧಾರ ಸರಿಯಲ್ಲ. ಜಲಾಶಯದಲ್ಲಿ ಸಾಕಷ್ಟು ನೀರು ಇದೆ. ನೀರಿನ ಲಭ್ಯತೆ ಆಧರಿಸಿ ನಿರ್ಣಯ ಕೈಗೊಳ್ಳಬೇಕಿತ್ತು. ನೀರಿನ ಲಭ್ಯತೆ ಗಮನಿಸದೆ ಕೈಗೊಂಡಿರುವ ನಿರ್ಣಯ ಸರಿ ಅಲ್ಲ ಎಂದು ದೂರಿದರು.
ಬೇಸಿಗೆ ಆಗಿರುವುದರಿಂದ ಬೆಳೆಗಳಿಗೆ ನಿರಂತರ ನೀರಿನ ಅವಶ್ಯಕತೆ ಇದೆ. ಅದರಲ್ಲೂ ಕಾಲುವೆ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಲು ಒಂದು ವಾರ ಸಮಯ ಬೇಕಾಗುತ್ತದೆ. ಸಜ್ಜಿ, ಶೇಂಗಾ ಕಾಳುವ ಕಟ್ಟುವ ಹಂತದಲ್ಲಿದೆ. ಭತ್ತ ಸೀತಿನ ಹಂತದಲ್ಲಿದೆ. ಇಂತಹ ಸಮಯದಲ್ಲಿ ನೀರು ನಿಲ್ಲಿಸಿದರೆ ಬಿಸುಲಿನ ತಾಪಮಾನಕ್ಕೆ ಬೆಳೆಗಳು ಬತ್ತಿ ಹೋಗಲಿದ್ದು ಲಕ್ಷಾಂತರ ರೂ. ಖರ್ಚು ಮಾಡಿದ ರೈತ ಸಾಲ ತೀರಿಸಲಾಗದೆ
ಅನಿವಾರ್ಯವಾಗಿ ಸಾವಿಗೆ ಶರಣಾಗ ಬೇಕಾಗುತ್ತದೆ ಎಂದರು.
ಕಳೆದ ವರ್ಷ ಜಲಾಶಯದಲ್ಲಿ ಸಾಕಷ್ಟು ನೀರಿದ್ದು ಹರಿಸಲಿಲ್ಲ ರೈತರು ಹಿಂಗಾರು ಬಿತ್ತನೆ ಮಾಡಲಿಲ್ಲ. ಈ ವರ್ಷ ಮಳೆ ಚೆನ್ನಾಗಿ ಆಗಿದೆ. ಜಲಾಶಯದಲ್ಲಿ ಸಾಕಷ್ಟು ನೀರು ಇದೆ. ಸರಕಾರ ಎರಡು ಬೆಳೆಗೆ ನೀರು ಕೊಡುವುದಾಗಿ ಭರವಸೆ ನೀಡಿತ್ತು.ಹಿನ್ನೆಲೆಯಲ್ಲಿ ರೈತರು ಹಿಂಗಾರು ಬಿತ್ತನೆ ಮಾಡಿದ್ದಾರೆ.23ಕ್ಕೆ ಬಂದ್ ಮಾಡಿ ಏ.1 ರಿಂದ 6ರ ವರೆಗೆ ನೀರು ಹರಿಸಿದಲ್ಲಿ ಬೆಳೆಗಳು ಒಣಗಿ ಹೋಗುತ್ತಿವೆ. ವಾರ ಬಂದಿ ಬಂದ್ ಮಾಡಬೇಕು ಸಲಹಾ ಸಮಿತಿ ನಿರ್ಣಯವನ್ನು ಪುನರ್ ಪರಿಶೀಲಿಸಿ ಏ.
15 ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಮುಖಂಡ ಚನ್ನಪ್ಪ ಆನೆಗುಂದಿ ಮಾತನಾಡಿ, ರೈತರು ಕಾರಣಾಂತರ ಗಳಿಂದ ಭತ್ತ ನಾಟಿ ಮಾಡಲು ವಿಳಂಬವಾಗಿದೆ. ಇನ್ನೂ ಒಂದು ತಿಂಗಳು ನೀರಿನ ಆವಶ್ಯಕತೆ ಇದೆ.
ವಾರಬಂದಿ ಬಂದ್ ಮಾಡಬೇಕು ಏ. 15 ರವರೆಗೆ ನಿರಂತರ ನೀರು ಹರಿಸ ಬೇಕು.ನಿರ್ಲಕ್ಷ್ಯ ವಹಿಸಿದಲ್ಲಿ ವಹಿಸಿದಲ್ಲಿ ನೂರಾರು ರೈತರೊಂದಿಗೆ ನಾರಾಯ ಣಪುರ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ಪ್ರಮುಖ ರಾದ ಎಸ್.ಎಂ.ಸಾಗರ, ಮಲ್ಗಣ್ಣ ಚಿಂತಿ, ಧರ್ಮಣ್ಣ ದೊರೆ, ಭೀಮಣ್ಣ ಮಿಲ್ಟಿ, ಮಲ್ಲಣ್ಣ ಹುಬ್ಬಳ್ಳಿ ಸೇರಿ ಇತರರಿದ್ದರು.
