ಹೆಣ್ಣು ಸಮಾಜದ ಕಣ್ಣು, ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದಿರಲಿ.

ಸುರಪುರ ಟೈಮ್ಸ್ ವಾರ್ತೆ
ಸುರಪುರ;ಎಲ್ಲಾ ಕಷ್ಟದ ದಿನಗಳನ್ನು ಎದುರಿಸಿ, ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿರುವ ಮಹಿಳೆಯರು ಸ್ಥೈರ್ಯದ ವಿವರಣೆಗೆ ಬೇರೆ ಪದಗಳು ಬೇಕಿಲ್ಲ. ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಎಲ್ಲಾ ಸಂಬಂಧಗಳನ್ನು ತುಂಬುವ ಮಹಿಳೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ದಿನ ಮೀಸಲಿದೆ ಇದು ಕೇವಲ ಆಚರಣೆಗೆ ಸೀಮಿತಗೊಳ್ಳದೆ ಅವರನ್ನು ಗೌರವದಿಂದ ಕಾಣಬೇಕು ಎಂದು ಅಜೀಮ್ ಪ್ರೇಮಜೀ ಫೌಂಡೇಷನನ್ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ ಹೇಳಿದರು.
ಅವರು ಇಂದು ಅಜೀಮ್ ಪ್ರೇಮಜೀ ಫೌಂಡೇಷನ್ ಮತ್ತು ಕರ್ನಾಟಕ ಬಿ.ಎಡ್.ಕಾಲೇಜ ಸಂಯುಕ್ತಾಶ್ರಯದಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಕರ ಕಲಿಕಾ ಕೇಂದ್ರ ತಿಮ್ಮಾಪುರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆಯಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತಗೊಳ್ಳದೆ, ಪರಸ್ಪರನ್ನು ಎಲ್ಲಾ ಕಷ್ಟದ ದಿನಗಳನ್ನು ಎದುರಿಸಿ. ಹೆಣ್ಣು ಮತ್ತು ಗಂಡಿನಲ್ಲಿ ಕೇವಲ ಜೈವಿಕ ವ್ಯತ್ಯಾಸಗಳನ್ನು ಹೊರತುಪಡಿಸಿ ಇನ್ನಾವುದೇ ವ್ಯತ್ಯಾಸಗಳಿಲ್ಲ ಎಂದು ಅಭಿಪ್ರಾಯಪಟ್ಟರು. ಉಪನ್ಯಾಸಕರಾದ ಮೌನೇಶ ಹಾವಿನಾಳ ಮಾತನಾಡುತ್ತಾ ಇಂದು ಮಹಿಳೆಯರು ಪುರಷನಂತೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಅವರಿಗೆ ಮನೆಗಳಲ್ಲಿ ಪ್ರ‍್ರೇತ್ಸಾಹ ಮತ್ತು ಬೆಂಬಲ ಕೊಡುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮ್ಮದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಕ್ವೀಜ್‌ವನ್ನು ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಅಜೀಮ್ ಪ್ರೇವ್ಮಜೀ ಫೌಂಡೇಷನ ಸಂಪನ್ಮೂಲ ವ್ಯಕ್ತಿ ಕೃಷ್ಣ ಬಿಜಾಸಪುರ ವಿದ್ಯಾರ್ಥಿಗಳಾದ ಸಕ್ರೇಪ್ಪ, ಮಂಜುಳಾ ಅಂಬ್ರೇಶ, ಶರಣಪ್ಪ ಹಣಮಂತ ಸುಧಾ ರೇಖಾ ಸೌಮ್ಯ ೩ನೇ ಸೆಮೀಸ್ಟರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಂಜನೇಯ ನಿರೂಪಿಸಿ ವಂದಿಸಿದರು

Leave a Reply

Your email address will not be published. Required fields are marked *

error: Content is protected !!