ಶ್ರೀರಾಮಲಿಂಗೇಶ್ವರ ಮಂಟೂರ ಶಾಖಾ ಮಠ ಪೇಠ ಅಮ್ಮಾಪೂರ 24 ನೇ ಜಾತ್ರಾ ಮಹೋತ್ಸವ ಮಾ.22ರಂದು ಪ್ರಾರಂಭ ಮಾ.23ಕ್ಕೆ ನೂತನ ರಥೋತ್ಸವ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪೂರ ಗ್ರಾಮದ ಓಂ ಶ್ರೀಮತ್ ಶಕ್ತಿ ವಿಶಿಷ್ಠದೈವತ್ ಅಖಂಡ ಕಲ್ಯಾಣಪುರ ವಿಶ್ವಜ್ಯೋತಿ ಶೂನ್ಯ ಸಿಂಹಾಸನಧೀಶ್ವರ ವೈರಾಗ್ಯ ಚಕ್ರವರ್ತಿ ಲಿಂಗಕ್ಯ ಶ್ರೀ ರಾಮಲಿಂಗೇಶ್ವರ ಕೃಪಾಕ್ಷೇತ್ರವೆಂದನಿಸಿದ ಆನಂದಾಶ್ರಮ ಮಂಟೂರಶ್ರೀ ಕ್ಷೇತ್ರ ಪೇಠ ಅಮ್ಮಾಪೂರ (ಶಾಖಾ ಮಠ) ತಾ.ಸುರಪುರ ಜಿ.ಯಾದಗಿರಿ 24 ನೇ ಜಾತ್ರಾ ಮಹೋತ್ಸವ ಹಾಗೂ ನೂತನ ರಥೋತ್ಸವ ಕಾರ್ಯಕ್ರಮವು ದಿನಾಂಕ 22-03-2025 ಶನಿವಾರದಂದು ಬೆಳಿಗ್ಗೆ 8 ಗಂಟೆಗೆ ಶ್ರೀ ರಾಮಲಿಂಗೇಶ್ವರ ಮೂರ್ತಿ ಮತ್ತು ಶ್ರೀ ಕಾಳಿಕಾದೇವಿ ಮೂರ್ತಿಗೆ ರುದ್ರಾಭಿಷೇಕ ನಡೆಯುವುದು.
ಬೆಳಿಗ್ಗೆ 9 ಗಂಟೆಗೆ ಗಣಹೋಮ,ಸುದರ್ಶನ ಹೋಮ,ನವಗ್ರಹ ಹೋಮ,ರಕ್ಷೋಗ್ನ ಹೋಮ,ಶ್ರೀ ಶಿವರಾಜ ಶಾಸ್ತ್ರಿ ಮಠದ ಭಕ್ತರು ಹುಣಸಗಿ ಯವರಿಂದ ನಡೆಯುವುದು.
ನಂತರ ಮಹಾ ಮಂಗಳಾರುತಿ ನೇರವೇರುವುದು ರಾತ್ರಿ 8 ಗಂಟೆಗೆ ದೀಪೋತ್ಸವ ಕಾರ್ಯಕ್ರಮ ನಂತರ ಭಜನೆ,ಡೊಳ್ಳಿನ ಪದ,ಅಕ್ಕನ ಬಳಗ ಹಾಗೂ ಇನ್ನೀತರ ಕಾರ್ಯಕ್ರಮಗಳು ಜರಗುವವು ದಿನಾಂಕ 23-03-2025 ರವಿವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಕಾಳಿಕಾದೇವಿ ಕತೃ ಗದ್ದಿಗೆಗೆ ಮಹಾ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನಡೆಯುವುದು ನಂತರ ಗುರುಗಳ ಭಾವಚಿತ್ರದೊಂದಿಗೆ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ,ಕುಂಭ ,ಕಳಸ, ಬಾಜಾ ಭಜಂತ್ರಿಗಳೊಂದಿಗೆ ಪೇಠ ಅಮ್ಮಾಪೂರ ಗ್ರಾಮದೊಳಗೆ ಮೆರವಣಿಗೆ ಮೂಲಕ ಮಧ್ಯಾಹ್ನ 12 ಗಂಟೆ ಮಠ ತಲುಪುವುದು ಸಾಯಂಕಾಲ 6.00 ಗಂಟೆಗೆ ರಥೋತ್ಸವ ಜರುಗುತ್ತವೆ ಎಂದು ಶ್ರೀರಾಮಲಿಂಗೇಶ್ವರ ಮಂಟೂರ ಶಾಖಾ ಮಠ ಪೇಠ ಅಮ್ಮಾಪೂರ ಲಿಂ. ಶ್ರೀಸದ್ಗುರು ರಾಮಲಿಂಗೇಶ್ವರ ಮತ್ತು ಕಾಳಿಕಾದೇವಿ ಜಾತ್ರೆ ಶ್ರೀ ರಾಮ ಶರಣರು ಶಾಖಾ ಮಠ ಘನ ಅಧ್ಯಕ್ಷತೆಯಲ್ಲಿ ಇವೆಲ್ಲಾ ಕಾರ್ಯಕ್ರಮಗಳು ಜರಗುವವು ಎಂದು ಮಠದ ಹಿತೈಷಿಗಳು ಹಾಗೂ ಅಖಂಡ ಕರ್ನಾಟಕ ವೀರಶೈವ ಸಂಘಟನೆ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪೂರ ಪತ್ರಿಕಾ ಹೇಳಿಕೆ ನೀಡಿದರು.

