ತಿಂಥಣಿಯ ಕಸ್ತೂರಬಾ ಗಾಂಧಿ ಬಾಲಿಕ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ವಿದ್ಯಾರ್ಥಿಗಳು ಕನಸುಗಳನ್ನು ಕಂಡು ಅದನ್ನು ಸಾಕಾರಗೊಳಿಸುವತ್ತ ಪರಿಶ್ರಮ ಪಡಬೇಕು. ವಿದ್ಯಾರ್ಥಿಗಳು ಕಷ್ಟಪಟ್ಟು ಓದದೆ, ಇಷ್ಟಪಟ್ಟು ಓದಬೇಕು. ಶಿಸ್ತಿನಿಂದ ಇರುವ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ಅಕ್ಕುಬಾಯಿ. ಎ. ಬಿರಾದಾರ ಹೇಳಿದರು.
ಅವರು ತಿಂಥಣಿಯ ಕಸ್ತೂರಬಾ ಗಾಂಧಿ ಬಾಲಿಕ ವಸತಿ ಶಾಲೆಯ 2024-25ನೇ ಸಾಲಿನ 8ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು
ವಿದ್ಯಾರ್ಥಿಗಳ ಬೆಳವಣಿಗೆಗೆ ಪೋಷಕರ ಹಾಗೂ ಗುರುಗಳ ಸಹಕಾರ ಸದಾ ಇರುತ್ತದೆ. ಹಾಗಾಗಿ ಇವರಿಗೆ ಋುಣಿಯಾಗಿರುವುದು ಎಲ್ಲರ ಕರ್ತವ್ಯ. ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಹರ್ಷ ವ್ಯಕ್ತಪಡಿಸಿದರು.
ತಿಂಥಣಿ ಕ್ಲಸ್ಟರಿನ C R P ಮನೋಹರ್ ನಾಯಕ ಮಾತನಾಡಿ, ತಾಯಿಯ ತ್ಯಾಗ, ತಂದೆಯ ಬೆವರಿನ ಮಹತ್ವವನ್ನು ಅರಿತ ವಿದ್ಯಾರ್ಥಿಯು ಜೀವನದಲ್ಲಿ ಉನ್ನತಿಯ ಶಿಖರವನ್ನೇರುತ್ತಾರೆ. ಇತರರು ತಮ್ಮನ್ನು ಗುರುತಿಸುವಂತೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟು ನೆನಪಿಟ್ಟುಕೊಳ್ಳುವಂತೆ ಮಾಡಬೇಕಾಗಿದೆ ಎಂದರು.ಕಾರ್ಯಕ್ರಮ ಅಧ್ಯಕ್ಷೆತೆಯನ್ನು ರೇಣುಕಾ ಹುಡೇದ್ ಹಾಗೂ ಮುಖ್ಯ ಅತಿಥಿಗಳಾಗಿ ಶರಣಾಗೌಡ ಅರಳಲ್ಲಿ ಹಾಗ ಎಲ್ಲಾ ಶಾಲಾ ಸಿಬ್ಬಂದಿಗಳು ಪಾಲಕ ಪೋಷಕರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

