ಏ. 27 ರಂದು ಸತೀಶ ಜಾರಕಿಹೊಳಿ ಅಭಿಮಾನಿ ಬಳಗದಿಂದ 3ನೇ ವರ್ಷದ ಸರಳ ಸಾಮೂಹಿಕ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಉಳ್ಳವರು ತಮ್ಮ ಮಕ್ಕಳ ಮದುವೆಯನ್ನು ಸಾಮೂಹಿಕ ವಿವಾಹದಲ್ಲಿ ಮಾಡುವ ಮೂಲಕ ಇತರರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕೆಂದು’ ಮುಖಂಡ ಭೀಮಣ್ಣ ಮೇಟಿ ಕರೆ ನೀಡಿದರು.
ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ಆಯೋಜಿಸಿರುವ 3ನೇ ವರ್ಷದ ಸರಳ ಸಾಮೂಹಿಕ ವಿವಾಹದ ಕರಪತ್ರಗಳನ್ನು ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮುಖಂಡ ಹನುಮೇಗೌಡ ಮರ್ಕಲ್ ಮಾತನಾಡಿ, ‘ಸಾಲ ಮಾಡಿ ಭರ್ಜರಿಯಾಗಿ ಮದುವೆ ಮಾಡುವುದಕ್ಕಿಂತ ಸರಳವಾಗಿ ಸಾಮೂಹಿಕ ವಿವಾಹದಲ್ಲಿ ತಮ್ಮ ಮಕ್ಕಳ ಮದುವೆ ಮಾಡುವುದರಿಂದ ನೆಮ್ಮದಿ ಇರುತ್ತದೆ’ ಎಂದರು.
ಅಭಿಮಾನಿ ಬಳಗದ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ವಾಗಣಗೇರಿ ಮಾತನಾಡಿ, ‘ಪ್ರತಿ ವರ್ಷ ಬಳಗದ ವತಿಯಿಂದ 25 ಜೋಡಿಗಳ ವಿವಾಹ ಮಾಡಿಕೊಡಲಾಗುತ್ತಿದೆ. ಈ ಬಾರಿ ಏ. 27ರಂದು ಕುಂಬಾರಪೇಟೆಯ ಎನ್.ಯು. ಕಲ್ಯಾಣ ಮಂಟಪದಲ್ಲಿ ವಿವಾಹ ಆಯೋಜಿಸಲಾಗಿದೆ’ ಎಂದರು.
‘ಬೌದ್ಧ ಧರ್ಮದ ಪ್ರಕಾರ ವಿವಾಹ ನೆರವೇರಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿ ಜೋಡಿಗೆ ರೂ. 50 ಸಾವಿರ ಪ್ರೋತ್ಸಾಹ ಧನ ದೊರಕುತ್ತದೆ. ತಾಳಿ, ಬಟ್ಟೆ ಕೊಡಲಾಗುವುದು. ಮೊದಲು ನೊಂದಣಿ ಮಾಡಿದವರಿಗೆ ಆದ್ಯತೆ’ ಎಂದರು.ಬಳಗದ ತಾಲ್ಲೂಕು ಸಮಿತಿ ಅಧ್ಯಕ್ಷ ಸಾಹೇಬಗೌಡ ವಾಗಣಗೇರಾ, ಮುಖಂಡರಾದ ಶರಣಪ್ಪ ವಾಗಣಗೇರಾ, ಇಮಾಮಸಾಬ ವಾಗಣಗೇರಾ, ಮಲ್ಲಪ್ಪ ದೊಡ್ಡಮನಿ ತಳವಾರಗೇರಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!