ಖಾನಾಪುರ ಗ್ರಾಮದ ಚನ್ನವೀರ ದೇವಸ್ಥಾನ ಜೀರ್ಣೋದ್ದಾರಕ್ಕೆ 2ಲಕ್ಷ ರೂ.ನೆರವು
ಸುರಪುರ ಟೈಮ್ಸ್ ವಾರ್ತೆ
ಕೆಂಭಾವಿ; ಪಟ್ಟಣದ ಸಮೀಪ ಖಾನಾಪುರ ಗ್ರಾಮದ ದೇವಸ್ಥಾನದ ಜೀರ್ಣೋದ್ವಾರಕ್ಕೆ ಚನ್ನವೀರ ಜನಕಲ್ಯಾಣ ಸೇವಾ ಸಂಸ್ಥೆಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ವೀರೆಂದ್ರ ಹೆಗ್ಗಡೆಯವರು 2 ಲಕ್ಷ ರೂ. ಸಹಾಯ ಧನ ಮಂಜೂರು ಮಾಡಿದ ಚೆಕ್‌ನ್ನು ತಾಲೂಕು ಯೋಜನಾಧಿಕಾರಿ ಸಂತೋಷ ಸಂಸ್ಥೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಅನೇಕ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯ ಗಳನ್ನು ಮಾಡಲಾಗುತ್ತಿದೆ. ಪೂಜ್ಯ ಅಪ್ಪಾಜಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕರ್ನಾಟಕದ ಮೂಲೆ ಮೂಲೆಗೆ ಸಾಮಾಜಿಕ
ಕಾರ್ಯಗಳನ್ನು ವಿಸ್ತರಿಸಲಾಗುತ್ತಿದೆ. ಧರ್ಮಸ್ಥಳ ಸಂಸ್ಥೆಯಿಂದ ದೇವಸ್ಥಾನ ಜೀರ್ಣೋದ್ಧಾರಕ್ಕೆ, ಕೆರೆ ತುಂಬುವದಕ್ಕೆ, ಸ್ಮಶಾನ ಅಭಿವೃದ್ಧಿಗೆ ಧನ ಸಹಾಯ ಒದಗಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪೂಜ್ಯರು ನೀಡಿದ 2 ಲಕ್ಷ ರೂ.ಚೆಕ್‌ನ್ನು ಸಂಸ್ಥೆಯ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು. ಶ್ರೀಮಠದ ಮಲ್ಲಿಕಾರ್ಜುನಯ್ಯ ಸ್ವಾಮಿ ಯವರು ಮಾತನಾಡಿ, ಚನ್ನವೀ ರ ಜನಕಲ್ಯಾಣ ಸೇವಾ ಸಂಸ್ಥೆಜೀರ್ಣೋ ದ್ವಾರಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ವಾಗಿದೆ ಎಂದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು, ಸ್ವ ಸಹಾ ಯ ಸಂಘಗಳ ಒಕ್ಕೂಟದ ಅಧ್ಯಕ್ಷರು ಪೂರ್ಣಿಮಾ, ಸ್ವ ಸಹಾಯ ಸಂಘಗಳ ಸದಸ್ಯರು, ವಲಯದ ಮೇಲ್ವಿಚಾರಕ ಅಶೋಕ, ಸೇವಾಪ್ರತಿನಿಧಿ ಶಿವಲೀಲಾ ಸೇರಿ ಅನೇಕರು ಉಪಸ್ಥಿತರಿದ್ದರು.