ಎಸಿ, ಎಸ್ಟಿ ಕುಂದು ಕೊರತೆಗಳ ಪರಿಹಾರಕ್ಕೆ ಆದ್ಯತೆ;ಆನಂದ ವಾಗಮೊಡೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ :ಪರಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿರುವ ಕುಂದು ಕೊರತೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದುಎಂದು ಸುರಪುರ ಠಾಣೆಯ ಪೊಲೀಸ್ ಇನ್‌ಸ್ಪ ಕ್ಟರ್ ಆನಂದ ವಾಗಮೊಡೆ ಹೇಳಿದರು.
ನಗರದ ಕುಂಬಾರಪೇಟದ ವೃತ್ತದಲ್ಲಿ ಪೊಲೀಸ್‌ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ ನಡೆಸಿಮಾತನಾಡಿ ಅವರು ಮತ್ತೆ ಎಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯದ ಜನರು ಸರಕಾರದ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು. ಮತ್ತು ಯಾರಾದರೂ ಜಾತಿ ನಿಂದನೆ ಅಂತ ಯಾವುದೇ ರೀತಿಯ ಘಟನೆಗಳು ನಡೆದಲ್ಲಿ ನಮಗೆ ದೂರನ್ನು ಸಲ್ಲಿಸಬಹುದು, ಸದಾ ಕಾಲ ಪೊಲೀಸ್ ಇಲಾಖೆ ನಿಮ್ಮ ಜೊತೆಯಲ್ಲಿ ಇರಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅನೇಕ ಮುಖಂಡರು
ಮಾತನಾಡಿ, ನಮ್ಮ ಏರಿಯಾಗಳಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಪೊಲೀಸ್ ಠಾಣೆಗೆ ಯಾರಾದರೂ ದೂರುಗಳನ್ನು ತೆಗೆದುಕೊಂಡು ಬಂದಲ್ಲಿ, ಪೊಲೀಸರು ತಕ್ಷಣಕ್ಕೆ ದೂರು ದಾಖಲೆ ಮಾಡಿಕೊಳ್ಳಬೇಕು. ಎಂದು ತಿಳಿಸಿದರು.
ಸಭೆಯಲ್ಲಿ ಪಿಎಸ್‌ಐ ಶರಣಪ್ಪ ಹವಾಲ್ದಾ‌ರ್ ಹಾಗೂ ಮುಖಂಡರಾದ ಮಾನಪ್ಪ ಗುಡ್ಡಕಾಯಿ ವೆಂಕಟೇಶ ಗುಡ್ಡಕಾಯಿ,ಮರಿಯಪ್ಪ ಗುಡ್ಡ ಕಾಯಿ, ಹಣಮಂತ ಭದ್ರಾವತಿ, ಭೀಮಣ್ಣ ಸಂತ್ವಾರ, ರಘುವೀರ ಹರಪನಹಳ್ಳಿ, ಸಿದ್ದಪ್ಪ ಗುಡ್ಡಕಾಯಿ, ಗೋವಿಂದ ನಾಯಕ ಟನಕೆದಾರ, ಕೃಷ್ಣಾಗುಡ್ಡಕಾಯಿ, ವೆಂಕಟೇಶ ಹರಪನಹಳ್ಳಿ, ಭೀಮಣ್ಣ ಗುಡ್ಡಕಾಯಿ, ಚಂದ್ರಶೇಖರ, ಹಣಮಂತ ಚಲವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!