ಮಾ.26 ರಿಂದ30ರ ವರೆಗೆ ಅಗತೀರ್ಥದ ಶ್ರೀ ರೇವಣ ಸಿದ್ದೇಶ್ವರರ ಜಾತ್ರಾ ಮಹೋತ್ಸವ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಪ್ರತಿ ವರ್ಷದಂತೆ ಈ ವರ್ಷವೂ ಹುಣಸಗಿ ತಾಲೂಕಿನ ಅಗತಿರ್ಥಿ ಗ್ರಾಮದ ಶ್ರೀ ಮದ್ ಜಗದ್ಗುರು ರೇವಣಸಿದ್ದೇಶ್ವರ ಹಾಗೂ ಶ್ರೀ ಗುರುಬಸವ ಮಹೋತ್ಸವವು ಶಿವಯೋಗಿಗಳ ಜಾತ್ರಾ ಮಹೋತ್ಸವ ಶ್ರೀ ಪರಮ ಪೂಜ್ಯ ರೇವಣಸಿದ್ದೇಶ್ವರ ಶಾಂತಮಯ ಮಹಾ ಸ್ವಾಮಿಗಳು ಹಾಲುಮತ ಗುರುಪೀಠ ಸರೂರ,ಅಗತೀರ್ಥ ರವರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ ಎಂದು ಮಠದ ಭಕ್ತಾದಿಗಳು ತಿಳಿಸಿದ್ದಾರೆ.


ಈ ಕುರಿತು ಹೇಳಿದ ಅವರು ಮಾ 26 ರಿಂದ 30ರ ವರೆಗೆ ಆಧ್ಯಾತ್ಮಿಕ ಪ್ರವಚನವು ಪ್ರತಿದಿನ ಬೆಳಗ್ಗೆ 9:00 ರಿಂದ 1 ಗಂಟೆಯವರೆಗೆ ಮತ್ತು ಸಾಯಂಕಾಲ 7 ಗಂಟೆಯಿಂದ 9 ಗಂಟೆಯವರೆಗೆ ನಡೆಯಲಿದ್ದು 5:00 ರೇವಣಸಿದ್ದೇಶ್ವರರ ಕರ್ತೃಗದ್ದಿಗೆಗೆ ಮಹಾರುದ್ರ ಅಭಿಷೇಕ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ
29ರಂದು ಶ್ರೀ ರೇವಣಸಿದ್ದೇಶ್ವರ ಮಹಾಪಲ್ಲಕ್ಕಿಯು ಸುಕ್ಷೇತ್ರ ತಿಂಥಣಿ ಮೌನೇಶ್ವರರ ಕ್ಷೇತ್ರದಲ್ಲಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಗಂಗಾ ಸ್ನಾನ ವಿವಿಧ ಪೂಜಾ ಕಾರ್ಯಕ್ರಮಗಳ ನಂತರ ಪಲ್ಲಕ್ಕಿ ಉತ್ಸವ 30 ರಂದು ಬೆಳಗ್ಗೆ ೫. ಗಂಟೆಗೆ ಶ್ರೀ ರೇವಣಸಿದ್ದೇಶ್ವರ ಪಲ್ಲಕ್ಕಿಯು ಸಕಲ ಡೊಳ್ಳಿನ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅಗತೀರ್ಥದ ಶ್ರೀಮಠಕ್ಕೆ ಆಗಮಿಸುವುದು.
ಈ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಸಂತ ಶರಣರು ಹಾಲುಮತ ಪರಂಪರೆಯ ಸಮಸ್ಯ ಪೂಜ್ಯರು ಒಡೆಯರು ಮಂಕು ಒಡೆಯರು ಪಟ್ಟದ ಪೂಜಾರಿಗಳು ಜನಪ್ರತಿನಿಧಿಗಳು ರಾಜಕೀಯ ಮುಖಂಡರು ವಿವಿಧ ಸಂಘಟನೆಯ ಅಧ್ಯಕ್ಷರು
ಪದಾಧಿಕಾರಿಗಳು ಕಲಾವಿದರು ಭಕ್ತಾದಿಗಳು ಭಾಗವಹಿಸಲಿದ್ದು,
ಈ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ರೇವಣಸಿದ್ದೇಶ್ವರ ಕೃಪೆಗೆ ಪಾತ್ರರಾಗುವಂತೆ ಶ್ರೀಮಠದ ಭಕ್ತರು ಕೋರಿದ್ದಾರೆ.