ಉಪವಾಸದಿಂದ ಮನಸ್ಸು ಮತ್ತು ದೇಹ ಶುದ್ದಿಯಾಗುತ್ತದದೆ; ರಾಜಾ ವೇಣುಗೋಪಾಲ ನಾಯಕ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ನಗರದ ಬಡಿ ಮಸೀದಿಯಲ್ಲಿ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ನದೀಮುಲ್ಲಾ ಹುಸೇನಿ ಇನಾಮದಾರವರು ಆಯೋಜಿಸಿರುವ ಇಫ್ತಾರಕೂಟದಲ್ಲಿ ಶಾಸಕರಾದ ರಾಜಾ ವೇಣುಗೋಪಾಲ ನಾಯಕರು ಭಾಗವಹಿಸಿ ಮಾತನಾಡುತ್ತಾ ಪವಿತ್ರ ರಂಜಾನ್ ಮಾಸದಲ್ಲಿ ಉಪವಾಸವಿರುವುದರಿಂದ ಮನಸ್ಸು ಮತ್ತು ದೇಹ ಶುದ್ದಿಯಾಗುವುದರ ಜೊತೆಗೆ ದಾನ ಧರ್ಮ ಮಾಡುವುದು ರಂಜಾನ ಹಬ್ಬದ ವಿಶೇಷತೆ, ಈ ಪವಿತ್ರ ಮಾಸದಲ್ಲಿ ಸರ್ವರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವಿಠ್ಠಲ್ ಯಾದವ್ ಪ್ರಮುಖರಾದ ವೆಂಕೋಬ ಯಾದವ್ ರಾಜಾ ಸುಶಾಂತ ನಾಯಕ ಹಣಮಂತರಾಯ ಮಕಾಶಿ ನಗರಸಭೆ ಸದಸ್ಯರಾದ ಮಹಬೂಬ್ ಖುರೇಷಿ ಶಕೀಲಹಮ್ಮದ್ ಖುರೇಶಿ ಮೌಲಾಲಿ ಸೌದಾಗರ್ ಅಬ್ದುಲ್ ಖಾದರ್ ಲೈನ್ ಪೀರ್ ಚಿನ್ನುಪಟೇಲ್ ಅಹಮದ್ ಖುರೇಷಿ ಖಾಜಾಹುಸೇನ ಗುಡಗುಂಟಿ ಅಬ್ಬಾಸ್ ಹಾಗೂ ಬಡಿ ಮಸೀದಿಯ ಅನೇಕ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
