ರೈತರ ಬೆಳೆಗಾಗಿ ಏಪ್ರಿಲ್ 10 ರವರೆಗೆ ನಿರಂತರ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲು ಸಿಎಂ ಸಿದ್ದರಾಮಯ್ಯ ಮನವಿ ಹಾಗೂ KBJNL ವ್ಯವಸ್ಥಾಪಕ ನಿರ್ದೇಶಕರಿಗೆ  ನೀರು ಹರಿಸಲು ಮಾಜಿ ಸಚಿವ ನರಸಿಂಹ ನಾಯಕ(ರಾಜುಗೌಡ) ನೇತೃತ್ವದ ನಿಯೋಗದಿಂದ ಮನವಿ

ಸುರಪುರ ಟೈಮ್ಸ್ ವಾರ್ತೆ

ಸುರಪುರ : ಯಾದಗಿರಿ ಜಿಲ್ಲೆಯ ಎಡದಂಡೆ ಪ್ರದೇಶಗಳಾದ ಸುರಪುರ ,ಶಹಾಪುರ,ವಡಗೇರಾ, ತಾಲೂಕಿನ ಕಾಲುವೆಗಳಿಗೆ ಏಪ್ರಿಲ್ 10 ರವರೆಗೆ ನಿರಂತರ ನೀರು ಹರಿಸುವಂತೆ ಸುರಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಾಜಿ ಸಚಿವ, ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ್ (ರಾಜುಗೌಡ) ನೇತೃತ್ವದಲ್ಲಿ ಇಂದು ಬೆಂಗಳೂರಿನ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಿಗೆ ಜಿಲ್ಲೆಯ ನಿಯೋಗದಿಂದ ಮನವಿ.
ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ ಕೃಷಿಗಾಗಿಯೇ ಶೇಕಡಾ 6.60 ಟಿ.ಎಂ.ಸಿ ನೀರು ಇದೆ ಅದೇ ನೀರನ್ನೆ ಕಾಲುವೆಗಳಿಗೆ ಹರಿಸಿದರೆ ರೈತರ ಸಮಸ್ಯೆ ಇತ್ಯರ್ಥವಾಗುತ್ತದೆ.
ಆದರೆ ಅಧಿಕಾರಿಗಳು ಕೈಗಾರಿಕೆಗಳಿಗೆ, ಹೊರ ರಾಜ್ಯಗಳಿಗೆ ನೀರು ಮಾರಿಕೊಳ್ಳುವ ಕಾರಣಗಳಿಗೆ ಸುಳ್ಳು ಮಾಹಿತಿ ನೀಡಿ ಕೃತಕ ಅಭಾವ ಸೃಷ್ಟಿ ಮಾಡಿರುತ್ತಾರೆ.
ಕಾರಣ ಜಲಾಶಯದ ನೀರಿನ ಮಟ್ಟವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ ಏಪ್ರಿಲ್ 10 ರವರೆಗೆ ಕಾಲುವೆಗಳಿಗೆ ನಿರಂತರ ನೀರು ಹರಿಸ ಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗು ಕೂಡಾ ಬೆಂಗಳೂರು ನಿವಾಸದಲ್ಲಿ ಭೇಟಿ ಮಾಡಿ ಜಲಾಶಯದ ವಾಸ್ತವ ಸ್ಥಿತಿಗತಿಗಳನ್ನು ವಿವರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಮುಖಂಡರಾದ ಕೆವೈ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ್, ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಎಮ್.ಹಳ್ಳಿಕೋಟಿ, ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಯಾಡ್ಯಾಪುರ ಸಿದ್ದನಗೌಡ ಕರಿಬಾವಿ , ಚಂದ್ರಶೇಖರಗೌಡ ಮಾಗನೂರ, ಕೃಷ್ಣಾರೆಡ್ಡಿ ಮುದ್ನೂರ್, ಹಾಗೂ ಜಿಲ್ಲೆಯ ಎಡದಂಡೆ ಕಾಲುವೆಯ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!