9ನೇತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 1 ರಿಂದ ವಿಶೇಷ ತರಗತಿಗಳನ್ನು ಕೈ ಬಿಡುವಂತೆ ಮನವಿ


ಸುರಪುರ ಟೈಮ್ಸ್ ವಾರ್ತೆ
ಸುರಪುರ; 9 ನೇತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 1 ರಿಂದ ವಿಶೇಷ ತರಗತಿಗಳನ್ನು ನಡೆಸಬೇಕೆಂಬ ವಿಚಾರವನ್ನು ಕೈ ಬಿಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೂಲಕ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಸುರಪುರ ತಾಲೂಕು ಘಟಕ ಮನವಿಯನ್ನು ನೀಡಿದರು.
ಪ್ರೌಢಶಾಲೆಗಳಲ್ಲಿ 9ನೇತರಗತಿ ವಿದ್ಯಾರ್ಥಿಗಳಿಗೆ 25 ನೇ ಸಾಲಿನ ಮೇ 1 ರಿಂದ ವಿಶೇಷತರಗತಿಗಳನ್ನು ನಡೆಸುವ ವಿಚಾರ ವ್ಯಕ್ತಪಡಿಸಲಾಗಿದೆ. ನಮ್ಮ ಭಾಗದ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಬಿಸಿಲಿನ ತಾಪ ಅತೀ ಹೆಚ್ಚು ಇರುತ್ತದೆ. ಆರೋಗ್ಯ ಸಚಿವರು ಸಾರ್ವಜನಿಕರಿಗೆ ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿರುತ್ತಾರೆ.ಇದರಿಂದ ವಿದ್ಯಾರ್ಥಿಗಳು ಬಿಸಿಲಿನಲ್ಲಿ ತಮ್ಮ ಮನೆಗಳಿಂದ ಸಾಕಷ್ಟು ದೂರ ಇರುವ ಶಾಲೆಗಳಿಗೆ ಬರುವುದರಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಹಾಗೂ ಮಗುವಿನ ದೈಹಿಕ & ಮಾನಸಿಕ ಸಾಮರ್ಥ್ಯವನ್ನಾಧರಿಸಿ ಮನೋತಜ್ಞರು ಹಾಗೂ ಶಿಕ್ಷಣತಜ್ಞರು ಮಕ್ಕಳಿಗೆ ವರ್ಷದಲ್ಲಿ 220 ದಿನಗಳ ಶಾಲಾ ಅವಧಿಯನ್ನು ನಿಗದಿಪಡಿಸಿರುತ್ತಾರೆ. ಇದನ್ನು ಉಲ್ಲಂಘಿಸಿ ಶಾಲಾ ದಿನಗಳ ಸಂಖ್ಯೆ ಹೆಚ್ಚಿಸುವುದು ಕೂಡ ನಿಯಮಬಾಹಿರ ಕ್ರಮವಾಗಿದೆ ಎಂದು ದೂರಿದ್ದರು.
ಪ್ರಾಥಮಿಕ ಶಾಲೆಯ ಹಂತದಲ್ಲಿ ಅಭ್ಯಾಸ ಮಾಡಿ ಪ್ರೌಢಶಾಲೆಗೆ ದಾಖಲಾಗುವ ಬಹುತೇಕ ವಿದ್ಯಾರ್ಥಿಗಳಿಗೆ ಮೂಲಾಕ್ಷರಗಳು ಹಾಗೂ ಗಣಿತದ ಮೂಲಕ್ರಿಯೆಗಳ ಜ್ಞಾನ ಇಲ್ಲದಿರುವುದು ಅತ್ಯಂತ ವಿಷಾದನೀಯ ಸಂಗತಿ.ಮೂಲಾಕ್ಷರಗಳ ಜ್ಞಾನ ಇಲ್ಲದ ವಿದ್ಯಾರ್ಥಿಗಳ ಪಠ್ಯವಸ್ತುವನ್ನು ಬೋಧಿಸಬೇಕೋ ಅಥವಾ ಮೂಲಾಕ್ಷರಗಳನ್ನು ಕಲಿಸಬೇಕೆಂಬುದು ತಿಳಿಯದಾಗಿದೆ. ಇದೆಲ್ಲದರ ನಡುವೆ ಪ್ರೌಢಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚುವರಿ ತರಗತಿ, ಕಲಿಕಾಸರೆ, ಮರುಸಿಂಚನ ಹೀಗೆ ಹತ್ತು ಹಲವಾರು ಇಲಾಖೆಯ ಎಲ್ಲಾ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇವೆ, ಹೀಗಾಗಿ ಬೇಸಿಗೆ ರಜಾದಿನಗಳಲ್ಲಿ 9 ನೇತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿ ತೆಗೆದುಕೊಳ್ಳಬೇಕೆನ್ನುವುದು ಅವೈಜ್ಞಾನಿಕ ಮತ್ತು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಮೇಲೆ ಮಾನಸಿಕ ಒತ್ತಡ ಹೆಚ್ಚಿಸುವ ಕೆಲಸವಾಗುತ್ತದೆ. ಇದರ ಬಗ್ಗೆ  ನಮ್ಮ ಶಿಕ್ಷಕರ ಸಮುದಾಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಯೋಜನೆಯನ್ನು ಕೈ ಬಿಡುವಂತೆ ಸಂಘವು ತಮ್ಮಲ್ಲಿ ಮನವಿ ಮಾಡಕೋಳ್ಳುತ್ತಿದೆ . ಇದರಾಗಿಯೂ  ಈ ಯೋಜನೆ ಜಾರಿಗೊಳಿಸಲು ಮುಂದಾದಲ್ಲಿ ಸಂಘವು ರಾಜ್ಯವ್ಯಾಪಿ ಹೋರಾಟ ಮತ್ತು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.ವಿಶೇಷ ತರಗತಿಗಳನ್ನು ನಡೆಸುವ ವಿಚಾರವನ್ನು ಕೈಬಿಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿ ಆರ್ ಸಿ ಖಾದರ್ ಪಟೇಲ್, ಧೀರೇಂದ್ರ ಕುಲಕರ್ಣಿ ,ಸಿದ್ದನಗೌಡ, ಮಲ್ಲಿಕಾರ್ಜುನ ಸೇರಿದಂತೆ ಇತರ ಶಿಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!