ಸಂಭ್ರಮದ ರಂಜಾನ್‌ ಆಚರಣೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ;ತಿಂಗಳು ಪೂರ್ತಿ ಉಪವಾಸ ವ್ರತ ಆಚರಣೆಯ ನಂತರ ಮುಸ್ಲಿಂ ಬಾಂಧವರು ಸೋಮವಾರ ಸಂಭ್ರಮದ ರಂಜಾನ್‌ (ಈದ್‌-ಉಲ್‌-ಫಿತರ್‌)  ಹಬ್ಬವನ್ನು ಸುರಪುರ ತಾಲೂಕಿನ ದೇವಪುರ ಗ್ರಾಮದ ಪಾಚನಕಟ್ಟಿ ಬಳಿ ಇರುವ ಈದ್ಗಾ ಮೈದಾನದಲ್ಲಿ ಗ್ರಾಮದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯನ್ನು ಮಾಡುವುದರ ಮೂಲಕ ಸಂಭ್ರಮವಾಗಿ ಆಚರಣೆ ಮಾಡಿದರು.

ರವಿವಾರ ಸಂಜೆಯಿಂದಲೇ ರಂಜಾನ್‌ ಆಚರಣೆಗೆ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದರಲ್ಲೂ, ರವಿವಾರ ಇಡೀ ರಾತ್ರಿ ಮುಸ್ಲಿಂ ಬಾಂಧವರು ಜಾಗರಣೆ ಆಚರಿಸುವ ಮೂಲಕ ಸೋಮವಾರ ಹಬ್ಬವನ್ನು ಆದರದಿಂದ ಬರ ಮಾಡಿಕೊಂಡರು.
ಸೋಮವಾರ ಬೆಳಗ್ಗೆ ಸ್ನಾನಾದಿ ವಿಧಿ-ವಿಧಾನಗಳನ್ನು ಪೂರೈಸಿ ತಮಗೆ ಸಮೀಪದ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನಂತರ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.ಇಸ್ಲಾಂ ಸಮುದಾಯದ ಪವಿತ್ರ ಹಬ್ಬ ಎಂದೇ ಕರೆಯಲಾಗುವ ರಂಜಾನ್‌ ಪ್ರಯುಕ್ತ ಮಕ್ಕಳಾದಿಯಾಗಿ ಪ್ರತಿಯೊಬ್ಬರೂ ಹೊಸ ಬಟ್ಟೆಗಳನ್ನು ಧರಿಸಿ ಭರ್ಜರಿ ಭೋಜನ ಸಿದ್ಧಪಡಿಸಿಟ್ಟು ನೆರೆ ಹೊರೆ, ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗಳಿಗೆ ಆಮಂತ್ರಿಸಿ ಸೀರ್‌ಕುರ್ಮಾ (ಸುರಕುಂಬಾ) ಮತ್ತು ಚಿಕನ್‌ ಹಾಗೂ ಮಟನ್‌ ಬಳಸಿ ತಯಾರಿಸಿದ್ದ ಹಲವು ವ್ಯಂಜನಗಳನ್ನು ಉಣಿಸಿ ಸಂಭ್ರಮಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!