ಪುರಾಣ ಪ್ರವಚನ ಆಲಿಸುವುದರಿಂದ ಪುಣ್ಯಪ್ರಾಪ್ತಿ:ರವಿ ಮುತ್ಯಾ.
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಪುರಾಣ ಪ್ರವಚನಗಳು ಆಲಿಸುವುದರಿಂದ ಮನುಷ್ಯನಿಗೆ ಪುಣ್ಯ ಪ್ರಾಪ್ತಿಯಾಗಲಿದೆ ಎಂದು ಗ್ರಾಮದ ರವಿ ಮುತ್ಯ ಹೇಳಿದರು
ತಾಲೂಕಿನ ದೇವಪುರ ಗ್ರಾಮದ ಶ್ರೀ ಗ್ರಾಮದೇವತೆ ದೇವಸ್ಥಾನದ ಆವರಣದಲ್ಲಿ ನಡೆದ ಎರಡನೇ ವರ್ಷದ ದೇವಿ ಪುರಾಣ ಕಾರ್ಯಕ್ರಮದ ಕುರಿತು ಸಾನಿಧ್ಯ ವಹಿಸಿ ಅವರು ಮಾತನಾಡಿದರು
ಗ್ರಾಮದಲ್ಲಿ ವರ್ಷಕ್ಕೆ ಎರಡು ಬಾರಿ ಪುರಾಣ ನಡೆದಿರುವುದು ನಮ್ಮೆಲ್ಲರ ಸೌಭಾಗ್ಯದ ಸಂಗತಿ ಅಲ್ಲದೆ ಮಹಾಕವಿ ಲಕ್ಷ್ಮೀಶನ ಜನ್ಮಸ್ಥಳವಾದ ದೇವಪುರ ಗ್ರಾಮದಲ್ಲಿ ಪುರಾಣದಂತ ಸತ್ಕಾರ್ಯಗಳು ನಡೆದಿರುವುದು ನಿಜಕ್ಕೂ ನಮ್ಮ ನಿಮ್ಮೆಲ್ಲರ ಸೌಭಾಗ್ಯದ ಸಂಗತಿ ಎಂದು ನುಡಿದರು.ಜೀವನದ ಜಂಜಾಟವನ್ನು ತೊರೆದು ಎರಡು ಗಂಟೆಗಳ ಕಾಲ ದೇವಿಯ ಪುರಾಣ ಆಲಿಸುವುದರಿಂದ ಮನುಷ್ಯನ ಮನಸ್ಸು ನಿಷ್ಕಲ್ಮಶವಾಗುತ್ತದೆ ಸರ್ವರಿಗೂ ಶುಭ ಉಂಟಾಗುತ್ತದೆ ಎಂದು ಪುರಾಣ ಕಾರ್ಯಕ್ರಮವನ್ನು ಉದ್ದೇಶಿಸಿ ತಮ್ಮ ಆಶೀರ್ವಚನವನ್ನು ನೀಡಿದರು.
ಗ್ರಾಮದಲ್ಲಿ ಯುಗಾದಿ ಹಬ್ಬದ ನಿಮಿತ್ಯವಾಗಿ ರವಿವಾರ ಆರಂಭವಾದ ಶ್ರೀ ದೇವಿ ಪುರಾಣವು 11 ದಿನಗಳ ಕಾಲ ನಡೆಯಲಿದೆ ಪೌರಾಣಿಕರಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ತಮ್ಮದೇ ಆದ ಪೌರಾಣತ್ವದಲ್ಲಿ ಛಾಪು ಮೂಡಿಸಿರುವ ಮದನಾಗುಂದಿ ಸಂಸ್ಥಾನ ಸರಸ್ವತಿ ಪೀಠಾಧೀಶರಾದ ಪರಮ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಜಿ ವಿಶ್ವಕರ್ಮ ಏಕದಂಡಗಿ ಮಠ ಶಹಾಪುರ ಇವರ ಕಂಚಿನ ಕಂಠದಿಂದ ದೇವಿ ಪುರಾಣವು ಪ್ರತಿ ದಿನ ಸಂಜೆ 7:30 ರಿಂದ 9:30ರ ವರೆಗೆ ನಡೆಯಲಿದೆ ಪ್ರತಿದಿನವೂ ಪುರಾಣ ಆಲಿಸಲು ಬರುವ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆಯನ್ನು ಗ್ರಾಮದ ಹಿರಿಯರು ಮುಖಂಡರು ಯುವಕರು ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಲಾಗಿದೆ
ಕಾರ್ಯಕ್ರಮದ ವೇದಿಕೆಯ ಮೇಲೆ ಶಾಸ್ತ್ರಿ ಮುತ್ಯ, (ಲಕ್ಷ್ಮಿಕಾಂತ ಜೋಷಿ) ಉಸ್ಮಾನ್ ಭಾಷಾ, ಬಸಯ್ಯ ಗಣಾಚಾರಿ, ಗಚ್ಚಪ್ಪ ಪೂಜಾರಿ, ದಳಪತಿಗಳಾದ ಲಿಂಗೋಜಿ ರಾವ್ ಕುಲಕರ್ಣಿ, ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಲಕ್ಷ್ಮಿ ಶರಣಬಸವ ಮಡಿವಾಳ ನೆರವೇರಿಸಿದರು ಬಸವರಾಜ ಪರಾಪುರ ಸ್ವಾಗತಿಸಿ ವಂದಿಸಿದರು.
ಅದ್ಭುತ ವ್ಯವಸ್ಥೆ
ಪ್ರತಿ ವರ್ಷ ಗ್ರಾಮದಲ್ಲಿ ಅಚ್ಚುಕಟ್ಟಾಗಿ ದೇವಿ ಪುರಾಣ ನಡೆಯುತ್ತದೆ ವಿಶಾಲವಾದ ಪ್ರಾಂಗಣ, ಭಕ್ತರ ಸಹಕಾರ ಪ್ರಸಾದ ವ್ಯವಸ್ಥೆ ನಿಜಕ್ಕೂ ಅದ್ಭುತವೇನಿಸುತ್ತದೆ. ಗ್ರಾಮದ ಹೆಸರೇ ಸೂಚಿಸುವಹಾಗೆ ದೇವಾಪುರದಲ್ಲಿ ಗ್ರಾಮದೇವತೆಯೇ ಪ್ರತಿ ದಿನ ಸದೃಶವಾಗುವ ವಾತಾವರಣ ನಿರ್ಮಾಣವಾಗಿದೆ.
–ಕಾಳಹಸ್ತೇಂದ್ರ ಮಹಾಸ್ವಾಮಿ
ಪೀಠಾಧೀಶರು ವಿಶ್ವಕರ್ಮ ಏಕದಂಡಗಿ ಮಠ ಶಹಪುರ

