ಏ.15 ರವರೆಗೆ ನೀರು ಹರಿಸಲು ನಾಳೆ ಭೀ.ಗುಡಿ ಬಳಿ ಹೆದ್ದಾರಿ ತಡೆದು ಪ್ರತಿಭಟನೆ; ರಾಜೂಗೌಡ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ರೈತರಿಗೆ ಸರ್ಕಾರದಿಂದ ಆಗುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಹಾಗೂ ಏ. 15ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಭೀಮರಾಯನಗುಡಿ ಕೆಬಿಜೆಎನ್‌ಎಲ್ ಮುಖ್ಯ ಕಚೇರಿ ಸಮೀಪದ ಬೀದರ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ತಡೆದು, ಕಚೇರಿಗೆ ಮುತ್ತಿಗೆ ಹಾಕಿ ಪಕ್ಷಾತೀತ ಬೃಹತ್ ಪ್ರತಿಭಟನೆಯನ್ನು ನಾಳೆ ಮಂಗಳವಾರ ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದ್ದು ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಕನ್ನಡ ಪರ, ರೈತರ ಪರ ಸಂಘಟನೆಗಳು, ಪ್ರಜ್ಞಾವಂತರು ಭಾಗವಹಿಸುವಂತೆ ಮಾಜಿ ಸಚಿವ ನರಸಿಂಹನಾಯಕ ರಾಜೂಗೌಡ ಪತ್ರಿಕೆ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ
ಈಗಾಗಲೇ ಜಿಲ್ಲೆಯ ರೈತರಿಗೆ ಏ. 6 ರವರೆಗೆ ನೀರು ಹರಿಸುವುದಾಗಿ ಐಸಿಸಿ ಸಭೆಯಲ್ಲಿ ತೀರ್ಮಾನಿಸಿದ್ದಾಗಿ ಎಂದು ತಿಳಿಸಿದರು,ಆದರೆ ರೈತರು ತಮ್ಮಬೆಳೆ ಉಳಿಸಿಕೊಳ್ಳಲು ಏ.15 ರವರೆಗೆನೀರು ಹರಿಸುವಂತೆ ಮಾಡಿದ ಹೋರಾಟಕ್ಕೆ ಪ್ರತೀಕಾರವಾಗಿ ಮಾ. 25ಕ್ಕೆ ನೀರು ಬಂದ್ ಮಾಡಿ ರೈತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಾರಾಯಣಪುರ ಎಡ ಬಲದಂಡೆ ನಾಲೆಗಳವ್ಯಾಪ್ತಿಯ ರೈತರ ಬೆಳೆ ರಕ್ಷಣೆಗೆ ಹಾಗೂ ಈ ಭಾಗದ ಜನ ಜಾನುವಾರುಗಳಿಗೆ ಅನುಕೂಲವಾಗುವಂತೆ ಏ.15 ರವರೆಗೆ ನೀರು ಹರಿಸಲು ಸರ್ಕಾರ ನಮ್ಮ ಜಿಲ್ಲೆಯ ರೈತರ ವಿರುದ್ಧ ಸೇಡಿನ ಮನೋಭಾವನೆ ತಳೆದು ಉದ್ದೇಶಪೂರ್ವಕವಾಗಿ ನೀರು ತಡೆಹಿಡಿದು ದಬ್ಬಾಳಿಕೆ ನಡೆಸುತ್ತಿದೆ. ರೈತರಿಗೆ ಅನ್ಯಾವಾದರೆ ಸುಮ್ಮನೆ ಕೂಡುವುದಿಲ್ಲ ಎಂದು ತಿಳಿಸಿರುವ ಅವರು, ನೀರು ಬಿಡದೇ ಇದ್ದರೆ ಸುಮ್ಮನೆ ಬಿಡುವ ಮಾತೆ ಇಲ್ಲ.
ತಕ್ಷಣ ಜಲಾಶಯದಲ್ಲಿರುವ ಕೃಷಿಬಳಕೆಯ ನೀರು ಕಾಲುವೆಗಳಿಗೆ ನಿರಂತರ ಹರಿಸಬೇಕು ಇಲ್ಲವಾದಲ್ಲಿ ರೈತರ ಆಕ್ರೋಶಕ್ಕೆ ಸರ್ಕಾರವೇ ಹೋಣೆಯಾಗಲಿದೆ ಎಂದು ಅವರು ಎಚ್ಚರಿಸುವ ಮೂಲಕ ನಾಳೆ ಭೀ.ಗುಡಿ ಮುಂದೆ ನಡೆಯುವ ಹೋರಾಟಕ್ಕೆ ರೈತರ ಹಿತಕ್ಕಾಗಿ ಪಕ್ಷಾತೀತವಾಗಿ ಪಾಲ್ಗೊಳ್ಳಬೇಕೆಂದು ಅವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

