ತಾಲೂಕಿನ ವಿವಿಧ ಕಡೆ ಸಾಮೂಹಿಕ ಪ್ರಾರ್ಥನೆ ಶುಭಾಶಯ ವಿನಿಮಯ, ರಂಜಾನ್ ಹಬ್ಬ ಮನುಷ್ಯನಲ್ಲಿ ತಾಳ್ಮೆ, ಸಂಯಮ ಕಲಿಸಿಕೊಡುತ್ತದೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ಶ್ರದ್ಧಾ, ಭಕ್ತಿಯಿಂದ ಸೋಮವಾರ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದರು.ರಂಜಾನ್ ತಿಂಗಳ ಕೊನೆಯಲ್ಲಿ ಚಂದ್ರ ದರ್ಶನ ಆದ ಮರುದಿನ ಈ ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಹಬ್ಬದ ಅಂಗವಾಗಿ ಬೆಳಿಗ್ಗೆ ಮುಸ್ಲಿಂ ಬಾಂಧವರು ಹೊಸಬಟ್ಟೆ ತೊಟ್ಟು ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಗರದಲ್ಲಿ ಈದುಲ್ ಫಿತರ್ ಪ್ರಾರ್ಥನೆಯಲ್ಲಿ ಮೌಲಾನಾ ಖಲಿಲುಲ್ಲಾ ಅವರು ಪ್ರಾರ್ಥನೆಯನ್ನು ನೆರವೇರಿಸಿ
ರಂಜಾನ್ ಮಾಸವು ಉಪವಾಸದ ಮೂಲಕ ಮನುಷ್ಯನಲ್ಲಿ ತಾಳ್ಮೆ ಹಾಗೂ ಸಂಯಮ ಕಲಿಸಿಕೊಡುತ್ತದೆ. ಮನುಕುಲದ ಒಳಿತಿಗಾಗಿ ಪರಸ್ಪರರಲ್ಲಿ ಸೌಹಾರ್ದ ಭಾವನೆ ಹೆಚ್ಚಾಗಲು ಪ್ರಾರ್ಥನೆ ಸಲ್ಲಿಸಿದರು.ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಪ್ರಾರ್ಥನೆ ಬಳಿಕ, ಒಬ್ಬರೊಬ್ಬರು ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.ದಾನದ ಹಬ್ಬ ರಂಜಾನ್ ಆಗಿರುವುದ ರಿಂದ ಉಳ್ಳವರು ದಾನ ಮಾಡುವ ಮೂಲಕ ಹಬ್ಬದ ಮಹತ್ವ ಸಾರಿದರು. ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ದವರು ನಡೆಸುವ ವ್ಯಾಪಾರ, ವಹಿವಾಟು ತಾಲೂಕಿನಲ್ಲಿ ಸ್ಥಗಿತಗೊಂಡಿತ್ತು. ಮೊಬೈಲ್ ಅಂಗಡಿ, ಗ್ಯಾರೇಜ್, ಟೀ ಕ್ಯಾಂಟೀನ್, ತರಕಾರಿ, ಬೇಕರಿ,ಹಣ್ಣಿನ ವ್ಯಾಪಾರಿಗಳು ಸೇರಿ ದಂತೆ ಇತರೆ ವ್ಯಾಪಾರವಹಿವಾಟು ನಡೆಯಲಿಲ್ಲ.
ಪ್ರಾರ್ಥನೆಯಲ್ಲಿ ಪ್ರಮುಖರಾದ. ಸೈಯದ್ ಅಹ್ಮದ್ ಪಾಶಾ ಖಾದ್ರಿ ಈದ್ಗ ಕಮಿಟಿಯ್ ಅಧ್ಯಕ್ಷರಾದ ಎ ಆರ್ ಪಾಷಾ ಅಹಮದ್ ಪಠಾನ್ ಖಾಜಾ ಖಲೀಲ ಅಹ್ಮದ್ ಅರಕೇರಿ ಉಸ್ತಾದ್ ವಜಾಹತ್ ಹುಸೇನ್ ಲಿಯಾಕತ್ ಹುಸೇನ್ ಉಸ್ತಾದ್ ಅಬ್ದುಲ್ ಮುಲ್ಲಾ ತೌಫಿಕ್ ಅಹಮದ್ ಅರ್ಕೇರಿ ಮೆಹಬೂಬ್ ಸಾಬ್ ಜಮಾದಾರ್ ಅನ್ವರ್ ಜಮಾದಾರ್ ಆರ್ ಕೆ ಕೋಡಿಹಾಳ ಖಾದರ್ ಪಟೇಲ್ ಇಮ್ತಿಯಾಜ್ ಹುಸೇನ್ ಕಲ್ಲಿಮುದ್ದೀನ್ ಫರೀದಿ ಅಬೂಬಕರ್ ಬೇಗ ಖಾಜಾ ನಿಜಾಮುದ್ದೀನ್ ಮೊಹಮ್ಮದ್ ಆರಿಫ್ ಅರ್ಷದ್ ಎಂಡಿ ಗೌಸ್ ಇರ್ಫನ್ ಮೌಲಾಲಿ ಮೌಲಾಲಿ ಸೌದಾಗರ ಸೇರಿದಂತೆ ಅನೇಕ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

