ಪೇಠ ಅಮ್ಮಾಪುರ ಗ್ರಾಮದಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಸಂಭ್ರಮದಿಂದ ರಂಜಾನ್ ಮಾಸಾಚರಣೆ ಮಾಡಿದರು.
ಅಂತಿಮ ದಿನವಾದ ಸೋಮವಾರ ಮುಸಲ್ಮಾನ್ ಬಾಂಧವರು ಈದ್ ಉಲ್ ಫಿತ್ರ್ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಿದ್ದು, ಬೆಳಿಗ್ಗೆಯೇ ನೂರಾರು ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದರು.
ಗ್ರಾಮದ ಜುಮ್ಮಾ ಮಸೀದಿಯಿಂದ ತಕ್ಬೀರ್ ಹೇಳುತ್ತಾ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ನೂರಾರು ಸಂಖ್ಯೆಯಲ್ಲಿ ಮುಸಲ್ಮಾನ್ ಬಾಂಧವರು ಬೆಳಿಗ್ಗೆ 9:30 ಗಂಟೆಗೆ ಖಾಜಿ ವ ಖತೀಬ ನದಿಮುಲ್ಲಾ ಹುಸೇನ್ ಇನಾಮದಾರ ರವರು ಸಾಮೂಹಿಕ ಪ್ರಾರ್ಥನೆ ಶಾಂತಿಯುತವಾಗಿ ನಡೆಸಿ ಕೊಟ್ಟರು.ಮೆರವಣಿಗೆಯಲ್ಲಿ ಸಾಗಿದ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಮಕ್ಕಳಾದಿಯಾಗಿ ಪ್ರತಿಯೊಬ್ಬರೂ ಹೊಸ ಬಟ್ಟೆಗಳನ್ನು ಧರಿಸಿ ಭರ್ಜರಿ ಭೋಜನ ಸಿದ್ಧಪಡಿಸಿಟ್ಟು ನೆರೆ ಹೊರೆ, ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗಳಿಗೆ ಆಮಂತ್ರಿಸಿ ಸೀರ್‌ಕುರ್ಮಾ (ಸುರಕುಂಬಾ) ಮತ್ತು ಚಿಕನ್ ಹಾಗೂ ಮಟನ್ ಬಳಸಿ ತಯಾರಿಸಿದ್ದ ಹಲವು ವ್ಯಂಜನಗಳನ್ನು ಉಣಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಮುಸಲ್ಮಾನ ಬಾಂಧವರು ಪ್ರಾರ್ಥನೆಯಲ್ಲಿ ಉಪಸ್ಥಿತರಿದ್ದರು.

