ನವೋದಯ ಶಾಲೆಗೆ ರಾಜ ಮದಕರಿ ನಾಯಕ ಆಯ್ಕೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕಿನ ಸಮೀಪದ ಅರಳಳ್ಳಿ ಗ್ರಾಮದ ಸ.ಹಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ರಾಜ ಮದಕರಿ ನಾಯಕ ಡಾ.ರಾಮಲಿಂಗಪ್ಪ ನಾಯಕ 2025-26ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ.ವಿದ್ಯಾರ್ಥಿಯ ಆಯ್ಕೆಗೆ ಶಾಲೆಯ ಪ್ರಧಾನ ಗುರುಗಳು, ಸಹಶಿಕ್ಷಕರು,ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಪೋಷಕರು ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
