ಯುಗಾದಿ ಮಾರನೇ ದಿನ ಬಣ್ಣದಾಟ

ಸುರಪುರ ಟೈಮ್ಸ್ ವಾರ್ತೆ
ಸುರಪುರ ;ತಾಲೂಕಿನ ವಿವಿಧ ಗ್ರಾಮಗಳಲ್ಲಿ ಯುಗಾದಿ ಹಬ್ಬದ ಮಾರನೇ ದಿನ ಯುವಕರು ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು.ಬಣ್ಣದಾಟ ಆಡುವುದು ಸಾಮಾನ್ಯವಾಗಿ ಹೋಳಿಹುಣ್ಣಿಮೆಯಲ್ಲಿ.ಆದರೆ, ತಾಲೂಕಿನ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಯುಗಾದಿ ಹಬ್ಬ ಆಚರಿಸಿದ ಮಾರನೇ ದಿನ ಬಣ್ಣದಾಟ ಆಡುವುದು ವಿಶೇಷವಾಗಿದೆ. ಇದಕ್ಕೆ ಕಾರಣವೂ ಇದೆ.ಯುಗಾದಿ ಹಬ್ಬ ಎನ್ನುವುದು ಹಿಂದೂ ಸಂಪ್ರದಾಯದ ಬಹು ದೊಡ್ಡ ಹಬ್ಬ. ಹಾಗೂ ಹೊಸ ವರ್ಷದ ಮೊದಲ ದಿನವಾಗಿದೆ. ಹಾಗಾಗಿ ಇದನ್ನು ಅತೀ ಸಂಭ್ರಮ ಹಾಗೂ ಸಡಗರದಿಂದ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಹಬ್ಬ ಆಚರಿಸಿ ಮಾರನೇ ದಿನ ಬಣ್ಣ ಆಡುವುದು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿಯೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಬ್ಬ ಆಚರಿಸಿ ಮಾರನೇ ದಿನ ಯುವಕರು ಬಣ್ಣದಾಟದಲ್ಲಿ ತೊಡಗಿರುವುದು ಕಂಡುಬಂತು.

