ದೇವತ್ಕಲ್ ಪಿಡಿಒ ಮೇಲೆ ಕ್ರಮಕ್ಕೆ ಒತ್ತಾಯ,ಕಚೇರಿಗೆ ಬಾರದ ಅಧಿಕಾರಿ, ಸಾರ್ವಜನಿಕರ ಸಮಸ್ಯೆ ಕೇಳುವರೇ ಇಲ್ಲಾ..

ಸುರಪುರ : ತಾಲೂಕಿನ ದೇವತ್ಕಲ್ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಯಾವೊಬ್ಬ ಅಧಿಕಾರಿಯು ಕಚೇರಿಗೆ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಕೂಡಲೇ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆಗೊಳಿಸುವಂತೆ ಯುವ ಮುಖಂಡ ಯಲ್ಲಪ್ಪ ರಾಯಗೇರಾ ಒತ್ತಾಯಿಸಿದ್ದಾರೆ.ರಾಯಗೇರ ಗ್ರಾಮದಲ್ಲಿ ಕಳೆದ ಹಲವು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು. ಈ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು, ಶೌಚಾಲಯ, ಸೇರಿದಂತೆ ಹಲವು ಕೆಲಸಗಳ ನಿಮಿತ್ಯ ಅಧಿಕಾರಿಗಳನ್ನು ಭೇಟಿ ನೀಡಿ ಮಾಹಿತಿ ನೀಡಲು ಗ್ರಾಮಸ್ಥರೊಂದಿಗೆ ಕಚೇರಿಗೆ ಭೇಟಿ ನೀಡಿದ್ದೇವೆ ಆದರೆ ಕಚೇರಿಯಲ್ಲಿ ಯಾವೊಬ್ಬ ಅಧಿಕಾರಿಯು ಇರಲಿಲ್ಲ. ಮಧ್ಯಾಹ್ನ ವರೆಗೂ ಕಾದು ಸುಸ್ತಾಗಿ ವಾಪಾಸ್ಸಾದೇವು ಪಿಡಿಒ ಬಾರದ ಹಿನ್ನೆಲೆಯಲ್ಲಿ ‘ಬಂದ ದಾರಿಗೆ ಸುಂಕವಿಲ್ಲ’ ಎಂದು ಮರಳುತ್ತಿದವು.. ಈ ಕುರಿತು ಸಿಬ್ಬಂದಿಯನ್ನು ವಿಚಾರಿಸಿದರೆ, ಸಮರ್ಪಕ ಉತ್ತರ ನೀಡುತ್ತಿಲ್ಲ. ಹಣ ಹಾಗೂ ಸಮಯ ಖರ್ಚು ಮಾಡುವ ಜನರಿಗೆ ಪರಿಹಾರ ಸಿಗದಂತಾಗಿದೆ.ಹೀಗಾದರೆ ಜನ ಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಯಾರ ಹತ್ತಿರ ಹೇಳಿಕೊಳ್ಳಬೇಕೆಂದು ಬೇಸರ ವ್ಯಕ್ತ ಪಡಿಸಿದ್ದಾರೆ.ಇನ್ನೂ ಅಭಿವೃದ್ಧಿ ಅಧಿಕಾರಿ ಕಚೇರಿಗೆ ಬರುವುದಿಲ್ಲ ಕರೆ ಮಾಡಿದರೆ ಸ್ವೀಕರಿಸುದಿಲ್ಲ ಇಂತಹ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆಗೊಳಿಸುವಂತೆ ಮೇಲಾಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.
