ಸುರಪುರ ಟೈಮ್ಸ್ ವರದಿ ಫಲ ಶೃತಿ ತಹಸೀಲ್ ಕಚೇರಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ….


ಸುರಪುರ ಟೈಮ್ಸ್ ವಾರ್ತೆ
ಸುರಪುರ; ಬೇಸಿಗೆ ಶುರುವಾಗಿ ತಿಂಗಳಾಗಿದೆ. ಬಿಸಿಲಿನ ಧಗೆ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕಚೇರಿ ಕೆಲಸಗಳಿಗೆ ಬರುವ ಜನ ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ತಾಲೂಕು ಆಡಳಿತದಲ್ಲಿ ಕುಡಿಯಲು ನೀರಿಲ್ಲ.
ಈ ಬಗ್ಗೆ ಸುರಪುರ ಟೈಮ್ಸ್ ವಾರ್ತೆಯಲ್ಲಿ ತಹಸೀಲ್ದಾರ ಕಚೇರಿಯಲ್ಲಿ ಕುಡಿಯುವ ನೀರಿಲ್ಲ ,ಹೊರಗಡೆ ಅಕ್ಕಪಕ್ಕದ ಅಂಗಡಿಯ ನೀರೆ ಗತಿ….. ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಎಚ್ಚೆತ್ತು
ತಾಲೂಕು ಕಚೇರಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಗುಡ್ಡಗಾಡು ಪ್ರದೇಶ ಆಗಿರುವುದರಿಂದ ಬಿಸಿಲು ಬಹಳ. ದೂರದ ಹಳ್ಳಿಗಳಿಂದ ಜನ ತಮ್ಮ ಕೆಲಸಕ್ಕೆಂದು ತಾಲೂಕು ಕಚೇರಿಗೆ ಬಂದರೆ ಕಚೇರಿಯಲ್ಲಿ ಕುಡಿಯಲು ಹನಿ ನೀರು ಸಿಗುವಂತಾಗಿದೆ.
ಶಾಶ್ವತ ಶುದ್ಧ ನೀರು ಕುಡಿಯುವಂತಾಗಬೇಕು
ತಾಲೂಕು ಕಚೇರಿಯಲ್ಲಿ 24×7 ಬಳಸಿಕೊಳ್ಳುವದರ ಮೂಲಕ ನೀರಿಗೆ ಯಾವುದೇ ಸಮಸ್ಯೆ ಯಾಗದಂತೆ ನೋಡಿಕೋಳಬೇಕು. ಶುದ್ಧ ನೀರಿನ ಘಟಕ ಕೆಟ್ಟಿರುವುದರಿಂದ ಇದರ ದುರಸ್ತಿ ಮಾಡಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಆದಷ್ಟು ಬೇಗನೆ 24×7 ಸಂಪರ್ಕ ಮಾಡಿಕೊಂಡು ಶುದ್ಧ ಕುಡಿಯುವ ನೀರು ವ್ಯವಸ್ಥೆ ಹಾಗಬೇಕು . ಇವಾಗ ನೀವು ತಾತ್ಕಾಲಿಕವಾಗಿ  ಕುಡಿಯುವ ನೀರು ವ್ಯವಸ್ಥೆ ಮಾಡಿದ್ದೀರಿ. ಇದನ್ನು  ತಪ್ಪಸಿ ,ಶಾಶ್ವತವಾಗಿ ಕಚೇರಿಯಲ್ಲಿ ಶುದ್ಧ ನೀರು ಕುಡಿಯುವಂತಾಗಬೇಕು ಎಂದು ದಲಿತ ಮುಖಂಡ ರಾಹುಲ್ ಹುಲಿಮನಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!