ಮಾಚಗುಂಡಾಳ ಕ್ಯಾಂಪ್ ನ ಶಾಲೆಯಲ್ಲಿ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನ, ನೌಕರರಿಗೆ ನಾಗರಿಕ ಸನ್ಮಾನ ,ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ

ಸುರಪುರ ಟೈಮ್ಸ್ ವಾರ್ತೆ
ಸುರಪುರ; ವಿದ್ಯಾರ್ಥಿಗಳ ಬೆಳವಣಿಗೆಗೆ ಪೋಷಕರ ಹಾಗೂ ಗುರುಗಳ ಸಹಕಾರ ಸದಾ ಇರುತ್ತದೆ. ಹಾಗಾಗಿ ಇವರಿಗೆ ಋುಣಿಯಾಗಿರುವುದು ಎಲ್ಲರ ಕರ್ತವ್ಯ. ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲುರ ಹೇಳಿದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಚಗುಂಡಾಳ ಕ್ಯಾಂಪ್ ನ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನ, ನೌಕರರಿಗೆ ನಾಗರಿಕ ಸನ್ಮಾನ ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ
ಭಾಗವಹಿಸಿ ಮಾತನಾಡಿದ ಅವರುಜೀವನದಲ್ಲಿ ಯಶಸ್ಸು ಕಾಣಲು ಮೊದಲು ಶ್ರಮಪಡಬೇಕು. ನಂತರ ತಕ್ಕ ಫಲ ದೊರೆಯುವುದು ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಕ್ಷರ ದಾಸೋಹದ ಅಧಿಕಾರಿ ಪಂಡಿತ ನಿಂಬೂರೆ ಮಾತನಾಡಿ ವಿದ್ಯಾರ್ಥಿಗಳು ಬುದ್ದಿವಂತಿಕೆ ಹಾಗೂ ಕೌಶಲವನ್ನು ಹೆಚ್ಚಿಸಿ ಜೀವನದ ಹಾದಿಯಲ್ಲಿ ಸಾಗಬೇಕು. ಇದರೊಂದಿಗೆ ಪೋಷಕರು ಹಾಗೂ ಗುರು ಹಿರಿಯರಿಗೆ ಗೌರವವನ್ನು ನೀಡಬೇಕೆಂದು ಎಂದು ಕಿವಿ ಮಾತು ಹೇಳಿದರು. ಸೋಮರಡ್ಡಿ ಮಂಗಿಹಾಳ ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ. ಅದಕ್ಕೆ ಪೂರಕವಾಗಿ ಮಕ್ಕಳು ನಿರಂತರವಾಗಿ ಅಭ್ಯಾಸ ಮಾಡಿ ಜ್ಞಾನ ಸಂಪಾದನೆ ಮಾಡಿದ್ದಲ್ಲಿ ನಿಶ್ಚಿತ ಗುರಿಯನ್ನು ಮುಟ್ಟಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದ ವೇದಿಕೆಯ ಮೇಲೆ ಇಸಿಓ
ಶರಣಬಸವ ಗಚ್ಚಿನಮನಿ ಸ. ಪ್ರೌ. ಶಿ. ಸಂಘ ಅಧ್ಯಕ್ಷ
ಖಾದರಪಟೇಲ,ಶರಣಬಸವ ಗೋನಾಳ,ದೇವರಾಜ ಪಾಟೀಲ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ದೇವೀಂದ್ರಪ್ಪ ಗೌಡ ಮಾಲಿ ಪಾಟೀಲ್
ಮುಖ್ಯ ಅತಿಥಿಗಳಾಗಿ
ಮಾಳಪ್ಪ ಪೂಜಾರಿ ,ಮಹಾದೇವಿ, ನಿಂಗಣ್ಣ ಅಂಗಡ ದೇವೀಂದ್ರಪ್ಪ,
ಹಯ್ಯಳಪ್ಪ.ಸಾಹುಕಾರ,ನಿಂಗಣ್ಣಗೌಡ ಪೋಲಿಸ ಪಾಟೀಲ್ ಮಾರ್ಥಂಡಪ್ಪ,ದರ್ಶನಾಪುರ,ಬಸಣ್ಣ ರುಕ್ಮಾಪುರ,ಶಿವಪ್ಪ ನಾಯಕ,ದೇವೀಂದ್ರಪ್ಪ ಚನ್ನೂರು,ಶರಣ ಗೌಡ ಮಾ.ಪಾ ,ಗೋಪಾಲತಳವಾರ,ಶುಭಾಷ ಹಡಪದ,ಹಣಮಂತ ಹಳ್ಳಿ ಸಗರ,ದ್ಯಾವಪ್ಪ ದರ್ಶನಾಪುರ, ಯಮನಪ್ಪ ರುಕ್ಮಾಪುರ,ಈಶ್ವರ ನಾಟೆಕಾರ,ಮಲ್ಲಿನಾಥ ಪಾಟೀಲ,ರಾಜು ಎಮ್. ಪೂಜಾರಿ,ಅಶೋಕ ದೊಡ್ಮನಿ ಶಾಲೆಯ ಪ್ರದಾನ ಗುರು ನಿಂಗಣ್ಣ ಗೋನಾಳ ನಿರೂಪಿಸಿದರು
ಕು. ದೀಪಾ. ಬಿದನೂರ ಸ್ವಾಗತಿಸಿದರು ದೇವೀಂದ್ರಪ್ಪ. ಪೂಜಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಗುರು ಪುಟ್ಟರಾಜನ ಕಲ್ಯಾಣ ಸೇವಾ ಸಮಿತಿ ಬೋನ್ಹಾಳ ವತಿಯಿಂದ ವಿದ್ಯಾರ್ಥಿಗಳಿಗೆ ತಟ್ಟೆ ಮತ್ತು ಲೋಟವನ್ನು ವಿತರಣೆ ಮಾಡಿಸಲಾಯಿತು.

ಪೋಟ ; ಬೀಳ್ಕೊಡುವ ಸಮಾರಂಭದಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲರೂ ಉದ್ಘಾಟಿಸುತ್ತಿರುವುದು
ಪೋಟ;ಶ್ರೀ ಗುರು ಪುಟ್ಟರಾಜನ ಕಲ್ಯಾಣ ಸೇವಾ ಸಮಿತಿ ವತಿಯಿಂದ ಶಾಲೆಗೆ ತಟ್ಟೆ ಹಾಗೂ ಲೋಟ ವಿತರಣೆ ಮಾಡುತ್ತಿರುವುದು

Leave a Reply

Your email address will not be published. Required fields are marked *

error: Content is protected !!