ವಚನ ಸಾಹಿತ್ಯದ ಸೃಷ್ಟಿಕರ್ತ ದೇವರ ದಾಸಿಮಯ್ಯ:ಸಣ್ಣೆಕ್ಕೆಪ್ಪ ಕೊಂಡಿಕಾರ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಆದ್ಯ ವಚನಕಾರ ಎಂದೇ ಕರೆಯಲ್ಪಡುವ ದೇವರ ದಾಸಿಮಯ್ಯನವರು ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ. ವಿಶ್ವದ ಪ್ರಥಮ ವಚನ ಸಾಹಿತ್ಯ ಸೃಷ್ಟಿಕರ್ತ ಎಂಬ ಹೆಗ್ಗಳಿಕೆ ಪಡೆದು ರಾಮನಾಥ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದರು ಎಂದು ಉಪ ಖಜಾನಾಧಿಕಾರಿ ಸಣ್ಣೆಕ್ಕೆಪ್ಪ ಕೊಂಡಿಕಾರ ಹೇಳಿದರು.
ಇಲ್ಲಿಯ ತಹಸಿಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಮುದನೂರು ದಾಸಿಮಯ್ಯ ಅವರ ಜನ್ಮಸ್ಥಳ ಕ್ರಿ.ಶ. ೧೦೭೦ ರವರೆಗೆ ಬಾಳಿ ಬದುಕಿದ್ದರು ಎಂಬ ಪ್ರತೀತಿ ಇದೆ. ನೇಕಾರಿಕೆ ಇವರ ವೃತ್ತಿಯಾಗಿದ್ದರೂ ಕೃಷಿ ಇವರ ಮೂಲ ಕಸುಬಾಗಿತ್ತು. ದಾಸೋಹಕ್ಕಾಗಿ ತನ್ನ ಹೊಲದಲ್ಲಿನ ಬೆಳೆಗಳನ್ನೆ ಬಳಸುತ್ತಿದ್ದ ಉಳಿದದ್ದನು ಜನರಿಗೆ ಹಂಚುತ್ತಿದ್ದ. ದೇವರ ಅನುಗ್ರಹ ಪಡೆದು ದೇವರ ದಾಸಿಮಯ್ಯ ನೆನಸಿಕೊಂಡ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಹೆಚ್.ಎ ಸರಕಾವಸ್ ಮಾತನಾಡಿ, ಮುದೆನೂರಿನ ದೇವರ ದಾಸಿಮಯ್ಯನವರ ಬದುಕು ಆದರ್ಶವಾಗಿದೆ. ಅವರ ನಡೆ, ನುಡಿ ಇಂದಿಗೂ ಮಾದರಿಯಾಗಿದೆ. ಅವರ ವಚನಗಳ ಭಾಷೆಯ ಬಳಕೆ ಅತ್ಯಂತ ಸರಳವಾಗಿದ್ದು ಶ್ರೀ ಸಾಮಾನ್ಯನಿಗೂ ತಿಳಿಯುತ್ತವೆ ಎಂದು ಹೇಳಿದರು.
ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಶಿವಶರಣಪ್ಪ ಗುಮ್ಮಾ ವೇದಿಕೆಯಲ್ಲಿದ್ದರು. ಈಶ್ವರ ಬನಶಂಕರಿ ದೇವಸ್ಥಾನದ ಅರ್ಚಕ ಲಿಂಗಯ್ಯ ಹಿರೇಮಠ, ಸೋಮಶೇಖರ ರುಕ್ಮಾಪುರ, ಸಂಗಪ್ಪ ಚೆಟ್ಟಿ, ಶರಣಪ್ಪ ಗುಮ್ಮಾ, ನಿಂಗಣ್ಣ ರಾಯಚೂರುಕರ್, ಈರಣ್ಣ ನಾಲವಾರ, ಸಂತೋಷ ಬಳ್ಳಾ, ಚನ್ನಬಸವ ರಾಯಚೂರಕರ್, ನಾಗಪ್ಪ ಗುಮ್ಮಾ, ಚನ್ನಪ್ಪ ಎಲಿಗಾರ, ಮಂಜುನಾಥ ಸಪ್ಪಂಡಿ, ಸಿದ್ದಪ್ಪ ಹೊನಗುಂಟಿ, ಸಂಗಣ್ಣ ಮಿಣಜಗಿ, ಬಸವರಾಜ ಬಡಗಾ ಇತರರಿದ್ದರು. ಎಸ್‌ಡಿಎ ರವಿ ನಾಯಕ ಸ್ವಾಗತಿಸಿ ಅಶೋಕ ನಿರೂಪಿಸಿ ಚನ್ನಬಸವ ವಂದಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಸಮಾಜದ ಬಾಂಧವರು ಉಪಸ್ಥಿತರಿದ್ದರು.

ಫೋಟೊ : ಸುರಪುರ ತಹಸಿಲ್ ಕಚೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!