ಡಾ. ಬಾಬು ಜಗಜೀವನ ರಾಂ ರವರ ಆದರ್ಶಗಳು ಎಲ್ಲರಿಗೂ ಮಾದರಿ: ಡಾ ಉಮಾದೇವಿ

ಸುರಪುರ ಟೈಮ್ಸ್ ವಾರ್ತೆ
ಸೈದಾಪುರ: ದೇಶದ ಅಭಿವೃದ್ಧಿ ಮತ್ತು ಶೋಷಿತ ವರ್ಗಗಗಳ ಪರವಾಗಿ ಹೋರಾಡಿದ ಮೇರು ವ್ಯಕ್ತಿಯ ಆದರ್ಶಗಳನ್ನು ಪ್ರತಿಯೊಬ್ಬರು ಮಾದರಿ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಉಮಾದೇವಿ ಅಭಿಪ್ರಾಯಪಟ್ಟರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಡಾ.ಬಾಬು ಜಗಜೀವನ ರಾಂ ರವರ 118ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶ ಮತ್ತು ಜನಸಾಮಾನ್ಯರ ಸೇವೆಗೆ ನಿಷ್ಠೆಯೇ ಅಭಿವೃದ್ಧಿಯ ಮೂಲ ಮಂತ್ರವಾಗಬೇಕು. ಭಾರತ ದೇಶದ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೇರು ವ್ಯಕ್ತಿತ್ವದ ಮಾಹನ್ ನಾಯಕ. ಅಷ್ಟೇ ಸರಳ ವ್ಯಕ್ತಿಯಾಗಿದ್ದರು. ದೇಶದಲ್ಲಿನ ಬಡತನ ನಿರ್ಮೂನೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕುತ್ತೇವೆ. ಅದೇ ರೀತಿಯಾಗಿ ಸಮಾಜದಲ್ಲಿನ ಮೇಲು-ಕೀಳು ಎಂಬ ಅಸ್ಪೃಶ್ಯತೆಯ ತಾರತಮ್ಯ ತೊಲಗಿಸಬೇಕು ಎಂಬುದು ಅವರ ಕನಸಾಗಿತ್ತು. ಸ್ವಾತಂತ್ರ್ಯ ಬಂದ ದಿನಗಳಲ್ಲಿ ದೇಶದಲ್ಲಿನ ಬಡತನ ನೀಗಿಸಲು ಹಸಿರು ಕ್ರಾಂತಿಯ ಮೂಲಕ ಆಹಾರದ ಕೊರತೆಯನ್ನು ದೂರಮಾಡಿದರು. ಕೃಷಿ ಸಚಿವರಾಗಿ ವಿದೇಶದಲ್ಲಿನ ಕೃಷಿ ತಂತ್ರಜ್ಞಾನವನ್ನು ನಮ್ಮ ದೇಶಕ್ಕೆ ತಂದು ಹಸಿರು ಕ್ರಾಂತಿಯನ್ನೇ ಸೃಷ್ಟಿಸಿದರು. ಇದರ ಉದ್ದೇಶ ಜನರು ಹಸಿವಿನಿಂದ ಸಾಯಬಾರದು ಎಂಬುದಾಗಿತ್ತು. ರಾಂ ರವರ ನಿಸ್ವಾರ್ಥ ಸೇವೆ ಮತ್ತು ದೇಶದ ಪ್ರಗತಿಗಾಗಿ ಸಮರ್ಪಣಾ ಮನೋಭಾವನೆಯಿಂದ ಇಂದಿಗೂ ಸಮಾಜದ ಆದರ್ಶಪ್ರಾಯ ವ್ಯಕ್ತಿಯಾಗಿ ಜನಮನದಲ್ಲಿ ಉಳಿದುಕೊಂಡಿದ್ದಾರೆ. ಅವರ ಆದರ್ಶಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಾ. ಅಶೋಕರೆಡ್ಡಿ, ಡಾ. ಅಶ್ವಿನಿ, ಡಾ. ಲಕ್ಷ್ಮ್ಮೀ ,ಜಮೀರ್ ಅಲಿ ಬದ್ದೇಪಲ್ಲಿ, ನಿಖಿತಾ, ಶ್ರುತಿ, ರುಚಿತಾ, ಪ್ರಶಾಂತ, ದುರ್ಗಪ್ಪ, ವಜೀರ್, ದೆವು ಸೇರಿದಂತೆ ಇತರರು ಉಪಸ್ಥಿತರಿದ್ದರು.
