ಗೋ ಸೇವೆ ಮಾಡುವುದರಿಂದ ಪುಣ್ಯ ಪ್ರಾಪ್ತಿ; ಮಾತಾ ಮಂಜಮ್ಮ ಜೋಗತಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಗೋವು ಪೂಜನೀಯ ಮಾತ್ರವಲ್ಲ ಸಮಾಜದ ಆರೋಗ್ಯ ರಕ್ಷಕವಾಗಿವೆ. ನಾವು ಗೋವುಗಳಿಗೆ ಉಳಿಸಿ, ಬೆಳೆಸಿದರೆ ಅವು ನಮ್ಮನ್ನು ಹಾಗೂ ಸಮಾಜವನ್ನು ಕಾಪಾಡುತ್ತವೆ. ಒಂದು ಗೋವು ಒಂದು ಕುಟುಂಬದ ಆರೋಗ್ಯ ರಕ್ಷಣೆ ಮಾಡುವ ತಾಕತ್ತು ಹೊಂದಿದೆ. ಹೀಗಾಗಿ ಎಲ್ಲರೂ ಗೋ ಸೇವೆ ಮಾಡುವುದರಿಂದ ಪುಣ್ಯ ಪ್ರಾಪ್ತಿ ಹಾಗುತ್ತದೆ ಎಂದು ಪದ್ಮ ಶ್ರೀ ಪ್ರಶಸ್ತಿ ವಿಜೇತೆ ಮಾತಾ ಮಂಜಮ್ಮ ಜೋಗತಿ ಹೇಳಿದರು.
ಅವರು ಸುರಪುರ ಸಮೀಪದ ಶ್ರೀ ಮೌನ ಯೋಗಿ ಸುಶೀಲ ಗೋಶಾಲೆಗೆ ಭೇಟಿ ನೀಡಿ ಗೋಮಾತೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಹಿಂದೂ ಧರ್ಮದಲ್ಲಿ ಗೋವಿಗೆ ತಾಯಿ ಸ್ಥಾನವಿದೆ. ಇದರೊಂದಿಗೆ ಗೋವು ಕಾಮಧೇನುವಿನ ರೂಪದಲ್ಲಿ ಸಕಲ ಇಷ್ಟಾರ್ಥಗಳನ್ನು ಈಡೇರಿಸುವವಳು ಎಂದು ಹೇಳಿದರು. ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ. ಪ್ರತಿದಿನ ಹಸವಿನ ಸೇವೆ ಮಾಡಿದರೆ ನಿಮ್ಮ ಎಲ್ಲಾ ಕೆಲಸಗಳು ನೆರವೇರುತ್ತವೆ ಮತ್ತು ಎಲ್ಲಾ ದೇವತೆಗಳ ಆಶೀರ್ವಾದವೂ ನಿಮಗೆ ಸಿಗುತ್ತದೆ. ಗೋವಿನ ಸೇವೆ ಮಾಡುವುದರಿಂದ ಮಾತ್ರ ಎಲ್ಲಾ ತೀರ್ಥಯಾತ್ರೆಗಳಿಗೆ ಭೇಟಿ ನೀಡಿದ ಫಲ ಸಿಗುತ್ತದೆ ಎಂದು ನುಡಿದರು.
ಗೋಶಾಲೆಯ ಪೂಜ್ಯರು ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಾತನಾಡಿ ವರ್ಷದ 365 ದಿನಕ್ಕೆ ತಲಾ ಒಬ್ಬರು ತಮ್ಮವರ, ಕುಟುಂಬದವರ ಹೆಸರಿನಲ್ಲಿ ಸದಸ್ಯತ್ವ ಪಡೆಯುವ ಮೂಲಕ ದೇಸಿ ಗೋವಿನ ತಳಿ ಸಂರಕ್ಷಣೆ, ಸಂವರ್ಧನೆಗಾಗಿ ಶ್ರಮಿಸುತ್ತಿರುವ ನಮ್ಮ ಗೋಶಾಲೆ ಸಂಸ್ಥೆ ಸಹಕರಿಸಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಸದಸ್ಯ ಅಮರಯ್ಯ ಸ್ವಾಮಿ ಜಾಲಿಬೆಂಚಿ, ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ,ಶರಣಬಸವ ಬಳಿ ,ಹಂಪಯ್ಯ ಹಿರೇಮಠ ರವಿಚಂದ್ರನ ಕುಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.


