ರಾಮು ನಾಯಕ ಅರಳಹಳ್ಳಿಗೆ ಪಿಎಚ್ ಡಿ ಪದವಿ
ಸುರಪುರ ಟೈಮ್ಸ್ ವಾರ್ತೆ

ಸುರಪುರ ;ತಾಲೂಕಿನ ಅರಳಹಳ್ಳಿ ಗ್ರಾಮದ ರಾಮಲಿಂಗಪ್ಪ ಜಿ.ನಾಯಕ (ರಾಮು ನಾಯಕ) ಅವರಿಗೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯ ಪಿ ಎಚ್ ಡಿ ಪದವಿ ನೀಡಿದೆ. ಡಾ.ಸಿದ್ದಗಂಗಮ್ಮ ಮಾರ್ಗದರ್ಶನದಲ್ಲಿ ರಾಮು ನಾಯಕ ಅವರು ಜಿಲ್ಲಾ ಪಂಚಾಯತಯಲ್ಲಿ ಸ್ಥಾಯಿ ಸಮಿತಿಗಳ ಪಾತ್ರ (ಯಾದಗಿರಿ ಜಿಲ್ಲೆಯನ್ನು ಅನುಲಕ್ಷಿಸಿ) ವಿಷಯದಲ್ಲಿ ಮಹಾ ಪ್ರಬಂಧ ಮಂಡಿಸಿರುತ್ತಾರೆ.
ಈ ಪ್ರಬಂಧಕ್ಕೆ ಅವರಿಗೆ ಪಿಎಚ್ ಡಿ ನೀಡಲಾಗಿದೆ ಎಂದು
ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲ ಸಚಿವರಾದ ಡಾ.ವಿಜಯ ಪೂಣಚ್ಚ ತಂಬಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
