ಕನ್ನಡದ ಬಗ್ಗೆ ಅಭಿಮಾನ ಇರಲಿ ದುರಭಿಮಾನ ಬೇಡ: ಹನುಮಂತ ನಾಯಕ (ಬಬ್ಲೂಗೌಡ)
ಸುರಪುರ ಟೈಮ್ಸ್ ವಾರ್ತೆ
ಹುಣಸಗಿ; ಕನ್ನಡ ಭಾಷೆ, ನೆಲ ಜಲದ ಬಗ್ಗೆ ಪ್ರತಿಯೊಬ್ಬ ಕನ್ನಡಿಗರಿಗೂ ಅಭಿಮಾನ ಇರಬೇಕು. ಆದರೆ, ದುರಭಿಮಾನ ಬೇಡ. ಅಭಿಮಾನ ಹೆಚ್ಚೆಚ್ಚು ಬೆಳೆದಷ್ಟೂ ಕನ್ನಡವೂ ಎತ್ತರಕ್ಕೆ ಬೆಳೆಯುತ್ತದೆ. ಕರ್ನಾಟಕವೂ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಬಿಜೆಪಿ ಮುಖಂಡ ಹನುಮಂತ ನಾಯಕ ಬಬ್ಲೂಗೌಡ ಹೇಳಿದರು.ಅವರು ಹುಣಸಗಿ ಪಟ್ಟಣದ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಬಸವರಾಜ ಪಡುಕೋಟೆ ಸಾರತ್ಯದ ನಮ್ಮ ಕರ್ನಾಟಕ ಸೇನೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ಕರುನಾಡ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡಿಗರಲ್ಲಿ ಅಭಿಮಾನ ಶೂನ್ಯತೆ ಆವರಿಸಿದೆ,ಭಾಷೆ, ನೆಲ, ಜಲ, ಗಡಿಯ ಬಗ್ಗೆ ಕಾಳಜಿ ಇಲ್ಲದಿದ್ದರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದರು.ಕನ್ನಡಕ್ಕೆ ಪ್ರಾಚೀನ ಸಾಂಸ್ಕೃತಿಕ ಶಕ್ತಿ ಇದೆ ಅಂತಹ ಶಕ್ತಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲಾ ಕನ್ನಡಿಗರ ಮೇಲಿದೆ ತಿಳಿಸಿದರು.
ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಬಸವರಾಜ ಪಡುಕೋಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿ ವಿಚಾರದಲ್ಲಿ ಮಹಾರಾಷ್ಟ್ರ ತಗಾದೆ ತೆಗೆದಾಗ ನಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ, ನಾಡು ನುಡಿ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದರೆ ಸಾಲದು, ಪ್ರತಿಯೊಬ್ಬ ಕನ್ನಡಿಗರು, ಜವಾಬ್ದಾರಿ ಅರಿತು ಕರ್ನಾಟಕದ ಸಮಗ್ರ ಅಭಿರುದ್ದಿಗೆ ಕೊಡುಗೆಯನ್ನು ನೀಡಬೇಕು. ನಾಡು-ನುಡಿಯ ಸಂರಕ್ಷಣೆಗೆ ನಮ್ಮ ಕರ್ನಾಟಕ ಸೇನೆ ಸಂಘಟನೆಯು ಸದಾ ಹೋರಾಟವನ್ನು ಸಕ್ರಿಯವಾಗಿ ಮಾಡುತ್ತ ಹೊರಟಿದೆ. ಅಲ್ಲದೆ ಪ್ರತಿಭಾವಂತರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದರ ಜತೆಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಕಲೆ, ಸಂಸ್ಕೃತಿಯ ವೃದ್ಧಿಗೆ ಪೂರಕವಾಗಿ ನಡೆದುಕೊಂಡು ಬಂದಿದೆ ಎಂದರು.
ನಮ್ಮ ಕರ್ನಾಟಕ ಸೇನೆ ಹಾಗೂ ಪದಾಧಿಕಾರಿಗಳು ಕನ್ನಡದ ಹೋರಾಟಕ್ಕೆ ಕಾರ್ಯೋನ್ಮುಖವಾಗಿರಬೇಕು. ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಸಮಾಜಮುಖಿ ಕಾರ್ಯ ಎಂದು ಹರ್ಷ ವ್ಯಕ್ತಪಡಿಸಿದರು.*ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಸನ್ಮಾನ*: ವೈದ್ಯರಾದ ಡಾ:ಮಲ್ಲಿಕಾರ್ಜುನ ಕೋರಿ, ಡಾ:ಪ್ರವೀಣಕುಮಾರ ಕುಂಬಾರ್, ಡಾ:ಪ್ರವೀಣಕುಮಾರ ಕುಳಗೇರಿ, ಡಾ:ರಮೇಶ ಚಿಂಚೋಡಿ, ನಾಟಿ ವೈದ್ಯ ದೇವರಾಜ ಶಾಸ್ತ್ರೀ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ನಮ್ಮ ಕರ್ನಾಟಕ ಸೇನೆಯ ವತಿಯಿಂದ ಗೌರವಿಸಲಾಯಿತು. ನಂತರ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮಗಳು ನಡೆದವು.
ಮ್ಯೂಸಿಕ್ ಮೈಲಾರಿ ಅವರ ಜಾನಪದ ಗೀತೆಗೆ ಕಾರ್ಯಕ್ರಮದಲ್ಲಿ ಶಿಳ್ಳೆ, ಕೆಕೆ,ಚಪ್ಪಾಳೆಗಳು ಕೇಳಿಬಂದವು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜಸ್ವಾಮಿ ಸ್ಥಾವರಮಠ, ಸಂಗಣ್ಣ ಸಾಹುಕಾರ ವೈಲಿ, ಮುರಿಗೆಣ್ಣ ದೇಸಾಯಿ, ಮೇಲಪ್ಪ ಗುಳಗಿ, ಸಿದ್ದನಗೌಡ ಪಾಟೀಲ್ ಕರೀಬಾವಿ, ಚಂದ್ರಶೇಖರ ಅಸ್ಕಿ ವಜ್ಜಲ್, ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಭೀಮನಗೌಡ ಬೈಲಾಪುರ, ಡಾ:ವೀರಭದ್ರಗೌಡ ಹೊಸಮನಿ, ಭೀಮಣ್ಣ ಶಖಾಪುರ, ಪ ಪಂ ಸದಸ್ಯ, ಮಲ್ಲು ಹೆಬ್ಬಾಳ, ಭೀಮರಾಯ ದೊಡ್ಡಮನಿ, ಪ ಪಂ ಸದಸ್ಯ, ರಾಜು ದೇಸಾಯಿ, ಮಲ್ಲು ದಂಡಿನ್, ಬಸನಗೌಡ ಮಾಲಿಪಾಟೀಲ, ಮಲ್ಲಿಕಾರ್ಜುನ ಶ್ರೀನಿವಾಸಪುರ, ಸಂಗಮೇಶ್ ವಜ್ಜಲ್, ಶ್ರೀಶೈಲ್ ವಜ್ಜಲ್, ಕರಿಯಪ್ಪ ವಜ್ಜಲ್,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೇ ಕು ಶ್ರೀದೇವಿ ಕಟ್ಟಿಮನಿ, ಕಲಬುರಗಿ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ರಕ್ಷಾ ದಾಮೋರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ಸಗರನಾಡಿನ ಖ್ಯಾತ ನಿರೂಪಣೆಗಾರ ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ನಂದಕುಮಾರ ಪೂಜಾರಿ ವಂದಿಸಿದರು.