ಅಂದ ಅನಾಥ ದಾರಿ ದೀಪವಾದ ಪುಟ್ಟರಾಜ ಗವಾಯಿಗಳು; ಆನಂದ ಪ್ಯಾಟಿ

ಸುರಪುರ ಟೈಮ್ಸ್ ವಾರ್ತೆಸುರಪುರ ;ಗದುಗಿನ ವೀರೇಶ್ವರ ಪುಣ್ಯಾಶ್ರಮದ ಮೂಲಕ ಪುಟ್ಟರಾಜ ಗವಾಯಿ ಅವರು ಅನ್ನ ಮತ್ತು ಜ್ಞಾನ ದಾಸೋಹದ ಮೂಲಕ ಸಾವಿರಾರು ಅಂದ ಅನಾಥ ಬಾಳಿಗೆ ಬೆಳಕಾಗಿದ್ದಾರೆ ಎಂದು ಆವಿಷ್ಕಾರ ಕಂಪ್ಯೂಟರ್ ಸಂಸ್ಥೆಯ ಅಧ್ಯಕ್ಷ ಆನಂದ್ ಪ್ಯಾಟಿ ಹೇಳಿದ್ದರು.ಪಟ್ಟಣದ ಆವಿಷ್ಕಾರ ಕಂಪ್ಯೂಟರ್ ತರಬೇತಿ ಕಾರ್ಯಾಲಯದಲ್ಲಿ ನಡೆದ ಶ್ರೀ ಪಂ.ಪುಟ್ಟರಾಜ ಕವಿ ಗವಾಯಿಗಳ ಅವರ 111ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಂಗೀತವನ್ನೆ ತಮ್ಮ ಉಸಿರಾಗಿಸಿಕೊಂಡಿದ್ದ ಗವಾಯಿ ಅವರು ಸಾವಿರಾರು ಅನಾಥ ಅಂಧ ಮಕ್ಕಳ ಬಾಳು ಬೆಳಗಿಸಿದ್ದಾರೆ ಎಂದರು.
ವಿಶ್ವನಾಥ ಹೂಗಾರ ಮಾತನಾಡಿ ಪುಟ್ಟರಾಜ ಗವಾಯಿ ಅವರು ಸಂಗೀತ, ಸಾಹಿತ್ಯ, ಕೀರ್ತನೆ, ನಾಟಕ ಸೇರಿದಂತೆ ಹಲವು ವಿದ್ಯೆಗಳನ್ನು ಶಿಷ್ಯ ಬಳಗಕ್ಕೆ ಧಾರೆಯೆರೆಯುವುದರ ಮೂಲಕ ನಾಡಿನ ಸಂಸ್ಕೃತಿ, ಪರಂಪರೆಯನ್ನು ಹಸಿರಾಗಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕಂಪ್ಯೂಟರ್ ತರಬೇತಿ ಶಿಕ್ಷಕಿ ಅಂಬಿಕಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.