ಸಾಮರಸ್ಯಕ್ಕೆ ಸಾಮೂಹಿಕ ಮದುವೆ ಪೂರಕ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ

ಸುರಪುರ ಟೈಮ್ಸ್ ವಾರ್ತೆ
ಜಾತಿ ಧರ್ಮಗಳ ಬೇಲಿಯನ್ನು ದಾಟಿ ಸರ್ವ ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ನಡೆಸುವ ಉಚಿತ ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗಿತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಕಲುಷಿತಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಸಾಮರಸ್ಯದಿಂದ ಬದುಕುವುದಕ್ಕೆ ಪ್ರೇರೇಪಿಸುತ್ತವೆ ಎಂದು ಶ್ರೀ ಗಿರಿ ಸಂಸ್ಥಾನ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಹೇಳಿದರು.
ತಾಲೂಕಿನ ದೇವಪೂರ ಗ್ರಾಮದಲ್ಲಿ ಅಂಬ್ರಣ್ಣ ಮುತ್ಯಾ ಮಲ್ಲಣ್ಣ ಮುತ್ಯಾ ರವರ ಪುಣ್ಯಸ್ಮರನೋತ್ಸವ ನಿಮಿತ್ತವಾಗಿ ಸೋಮವಾರ 16 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉಚಿತ ಸಾಮೂಹಿಕ ವಿವಾಹ ಆಯೋಜಿಸಿ ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿರುವುದು ಉತ್ತಮ ಬೆಳವಣಿಗೆ. ಉಚಿತ ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದ ಜೊತೆಗೆ ಬಡವ ಶ್ರೀಮಂತ ಎನ್ನುವ ಬೇದಭಾವ ಹೋಗಲಾಡಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದೇವಾಪುರದ ಶಿವಮೂರ್ತಿ ಶಿವಾಚಾರ್ಯ,
ವೀರಗೋಟದ ಅಡಿವಿಲಿಂಗ ಮಹಾರಾಜರ ಗುಳುಬಾಳದ ಮರಿ ಹುಚ್ಚೇಶ್ವರ ಮಹಾಸ್ವಾಮಿಗಳು ಸಗರದ ಸೋಮೇಶ್ವರ ಶಿವಾಚಾರ್ಯರು ಮಳಕೇಡದ ಹಜರತ್ ಸೈಯದ್ ಶಾಹಿ ಖಾದ್ರಿ, ಸೈಯದ್ ಮುಬಾರಕ್ ಬಾದಷಹ ಅಲಾವಿ ಪರಂಪರೆಯ ರಾಜ್ಯಾಧ್ಯಕ್ಷರು ಮಾತನಾಡಿದರು.ವೇದಿಕೆಯ ಮೇಲೆ
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಹನುಮಂತ ನಾಯಕ(ತಾತಾ) ಕಾಂಗ್ರೆಸ್ ಮುಖಂಡ ಸಂತೋಷ್ ನಾಯಕ , ಬಿಜೆಪಿ ಮುಖಂಡ ಬಬ್ಲು ಗೌಡ ಈಶ್ವರ ನಾಯಕ ಅನೇಕ ಪೂಜರು ಮತ್ತು ಅನೇಕ ರಾಜಕೀಯ ಮುಖಂಡರು ಉಪಸ್ಥಿತರಿದ್ದರು