ಮೆಥೋಡಿಸ್ಟ ಸೆಂಟ್ರಲ್ ಚರ್ಚನಲ್ಲಿ ಭಕ್ತಿ ಭಾವದಿಂದ ಬೂದಿ ಬುಧವಾರ ಆಚರಣೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಯೇಸುಕ್ರಿಸ್ತರ ಕಷ್ಟಗಳ ಕಾಲವನ್ನು ಸ್ಮರಿಸುವ 40 ದಿನ ತಪಸ್ಸು ಕಾಲ ಬುಧವಾರದಿಂದ ಆರಂಭ ಗೊಂಡಿದ್ದು, ತಪಸ್ಸು ಕಾಲದ ಆರಂಭದ ದಿನವನ್ನು ವಿಭೂತಿ(ಬೂದಿ) ಬುಧವಾರ(ಆ್ಯಶ್ ವೆಡ್ನೆಸ್ ಡೇ)ವಾಗಿ ಆಚರಿಸಲಾಗುತ್ತದೆ ಎಂದು ಜಿಲ್ಲಾ ಮೇಲ್ವಿಚಾರಕ ರೆವರೆಂಡ ಎಸ್. ಸತ್ಯಮಿತ್ರ ಹೇಳಿದರು.
ಅವರು ನಗರದ ಮೆಥೋಡಿಸ್ಟ ಸೆಂಟ್ರಲ್ ಚರ್ಚನಲ್ಲಿ ಅತ್ಯಂತ ಶ್ರದ್ಧಾ, ಭಕ್ತಿ ಭಾವದಿಂದ ಬೂದಿ ಬುಧವಾರ ಆಚರಣೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಮಾನವನ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪದ ಗುರುತಾಗಿ ಪ್ರಾರ್ಥನೆ, ಉಪವಾಸ, ದಾನ ಧರ್ಮದ ಮೂಲಕ ಮನ ಪರಿವರ್ತನೆಯೊಂದಿಗೆ ಪ್ರಭು ಯೇಸುವಿನ ಪುನರುತ್ಥಾನದಲ್ಲಿ ಪಾಲ್ಗೊಳಬೇಕು ಎಂದು ದೈವ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ವಿಶೇಷ ಆರಾಧನೆ ಮತ್ತು ವಿಶೇಷ ಪ್ರಾರ್ಥನೆ ಜರುಗಿತು. . ಕಾರ್ಯಕ್ರಮದಲ್ಲಿ ಸಭಾ ಪಾಲಕರಾದ ರೆವರೆಂಡ್ ಪ್ರಕಾಶ್ ಹಂಚಿನಾಳ ಮೆಥೋಡಿಸ್ಟ್ ಚರ್ಚ್ ನ ಮುಖಂಡರುಗಳಾದ ಸಾಮುವೇಲ್ ಮ್ಯಾಥ್ಯೂ, ವಸಂತ ಕುಮಾರ, ಪಾಲ್ ನಾಯ್ಕ,ರಮೇಶ ಪಾಲ್, ದೇವಪುತ್ರ, ಇಮಾನುವೆಲ್, ಥಾಮಸ್ ಮ್ಯಾಥ್ಯೂ, ಮಾನುವೆಲ್ ತಂಗಪಾಂಡೆ,ವಿಜಯ ಕುಮಾರ, ನವೀನಕುಮಾರ, ಮನೋರಮ್ಮ ಸತ್ಯಮಿತ್ರ, ಸುಜಾತ, ಸುನೀಲಾ ಶಾಂತಕುಮಾರ, ಸೋನಾಸುಕುಮಾರಿ, ಸುಮತಿ ವಸಂತ, ಸುಜಾತ ಜಯಪ್ಪ, ಸುಕುಮಾರಿ, ಲಲಿತಾ, ಸಾಗರಿಕ, ಅನಿತಾ,ಸ್ಟೆಲ್ಲಾ, ಸರಿತಾ,ಶೋಭಾ, ಶಾಲಿನಿ,ಜೋವಿತಾ ಉಪಸ್ಥಿತರಿದ್ದರು.
