ವೇಣುಗೋಪಾಲ ಮಹಿಳಾ ಭಜನಾ ಮಂಡಳಿರಜತ ಮಹೋತ್ಸವ “ಭಗವಂತನ ನಾಮ ಸ್ಮರಣೆಯಿಂದ ಪುಣ್ಯ ಪ್ರಾಪ್ತಿ”

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಈ ಕಲಿಯುಗದಲ್ಲಿ ಯಾವುದೇ ಯಜ್ಞ ಯಾಗಾದಿಗಳು ಬೇಕಾಗಿಲ್ಲ. ಭಗವಂತನ ನಾಮ ಸ್ಮರಣೆವೊಂದೇ ಮಾಡಿದರೆ ಸಾಕು ಪುಣ್ಯ ಲಭಿಸುತ್ತದೆ ಎಂದು ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಲಯ ಪ್ರಮುಖರಾದ ಶ್ರೀನಿವಾಸಚಾರ್ಯ ಪದಕಿ ಹೇಳಿದರು.

ನಗರದ ದರಬಾರ ಆವರಣದಲ್ಲಿ ಜರುಗಿದ ಶ್ರೀ ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಂತನ ಸಂಕೀರ್ತನೆ ದಾಸರು ಹೇಳಿರುವಂತೆ ಭಗವಂತನ ನಾಮ ಸ್ಮರಣೆಯಿಂದ ನಾವು ಮಾಡಿರುವ ಪಾಪಗಳು ಕಳೆದು ಹೋಗುತ್ತವೆ ಎಂದು ಹೇಳಿದರು.ದಾಸ ಸಾಹಿತ್ಯವು ಸುಮಾರು. ಹತ್ತು ಸಾವಿರ ವರ್ಷಗಳ ಹಿಂದೆ ಪ್ರಾರಂಭವಾಯಿತೆಂದು ಭಾಗವತದಿಂದ ತಿಳಿದು ಬರುವಂತೆ ಭಗವಂತನ ಸಂಕೀರ್ತನೆ ವೇಣುನಾದ ಮಾಡುವಾಗ ದೇವತೆಗಳಾದ ಗೋಪಿಕಾ ಸ್ತ್ರೀಯರು ಮನನ ಮಾಡಿಕೊಂಡು ಕೃಷ್ಣನ ಗುಣಗಾನ ಮಾಡುತ್ತಿದ್ದರು. ನಂತರ ದಾಸ ಸಾಹಿತ್ಯ ನರಹರಿ ತೀರ್ಥರಿಂದ ಪ್ರಾರಂಭಗೊಂಡು ಪುರಂದರದಾಸರು, ವಿಜಯದಾಸರು, ಜಗನ್ನಾಥದಾಸರು ಸೇರಿ ಅನೇಕ ದಾಸವರೇಣ್ಯರು ಅದನ್ನು ಮುಂದುವರೆಸಿದರು. ಈಗ ಭಜನಾ ಮಂಡಳಿಗಳು ಭಗವಂತನ ನಾಮ ಸಂಕೀರ್ತನೆಯನ್ನು ಮಾಡುತ್ತಿರುವದರಿಂದ ಜನರಲ್ಲಿ ಮನಸ್ಸನ್ನು ಪರಿವರ್ತನೆಯಾಗುತ್ತದೆ. ಮನೆಯಲ್ಲಿ ದಾಸ ಸಾಹಿತ್ಯದ ಹಾಡುಗಳನ್ನು ಹಾಡಿದರೆ ಉತ್ತಮ ಸಂಸ್ಕಾರ ಬೆಳೆಯುತ್ತದೆ. ಸುರಪುರಕ್ಕೆ ವಿಶೇಷ ಸ್ಥಾನವಿದೆ. ತಿರುಪತಿ ವೆಂಕಟರಮಣ ಸಾಕ್ಷಾತ ಇಲ್ಲಿಯೇ ನೆಲೆಸಿದ್ದಾನೆ. ಇಲ್ಲಿಯ ಅರಸು ತಿರುಪತಿಯ ವೆಂಕಟರಮಣನ ಪರಮಭಕ್ತರಾಗಿದ್ದರು ಎಂದು ವಿವರಿಸಿದರು.

ಪಂ. ನಾರಾಯಣಾಚಾರ್ಯ ಐಜಿ ಮಾತನಾಡಿ, ಭಕ್ತರು ನನ್ನನ್ನು ಎಲ್ಲಿ ಸ್ತುತಿಸುತ್ತಾರೋ ಅಲ್ಲಿ ನಾನು ಇರುತ್ತೇನೆ ಎಂದು ಹೇಳಿರುವದು ಭಗವಂತ ಕರುಣಾ ಮೂರ್ತಿ ಹೊಗಳಿದರು. ಸುರಪುರ ಅರಸು ವಂಶಸ್ಥರಾದ ರಾಜಾ ಲಕ್ಷ್ಮೀನಾರಾಯಣ

ನಗರ ಸಂಕೀರ್ತನೆ

ಇದೇ ಸಂದರ್ಭದಲ್ಲಿ ನಗರದ ರಘುವೀರ ರಾಮಧ್ಯಾನ ಭಜನಾ ಮಂಡಳಿ, ಕಾತ್ಯಾಯನಿ ಭಜನಾ ಮಂಡಳಿ ಸೇರಿ ವಿವಿಧ ಭಜನಾ ಮಂಡಳಿಗಳು ಹಾಗೂ ಹುಣಸಗಿ, ಯಾದಗಿರಿ, ಕೆಂಭಾವಿಯಿಂದ ಆಗಮಿಸಿದ್ದ ಮಹಿಳಾ ಭಜನಾ ಮಂಡಳಿಗಳು ಪಾಲ್ಗೊಂಡಿದ್ದವು.

ಸುರಪುರ ದರಬಾರ ಆವರಣದಲ್ಲಿ ಶ್ರೀ ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯ ರಜತ ಮಹೋತ್ಸವವನ್ನು ರಾಜಾ ಲಕ್ಕಿ ಲಕ್ಷ್ಮೀನಾರಾಯಣ ನಾಯಕ ಉದ್ಘಾಟಿಸಿದರು. ಶ್ರೀನಿವಾಸಾಚಾರ್ಯ ಪದಕಿ, ನಾರಾಯಣಾಚಾರ್ಯ ಐಜಿ, ಉಮಾಕಾಂತ ಮಹಾರಾಜರು, ಕೇದಾರನಾಥಶಾಸ್ತ್ರಿ ಇತರರಿದ್ದರು.

ನಾಯಕ ಉದ್ಘಾಟಿಸಿದರು. ಕೂಡಲಗಿಯ ಬಾಬಾ ಮಹಾರಾಜರ ಮಠದ ಪೀಠಾಧಿಪತಿ ಉಮಾಕಾಂತ ಸಿದ್ಧಮಹಾರಾಜರು, ಸುರಪುರ ಪಂಚಾಂಗ ಕರ್ತೃ ಕೇದಾರನಾಥ ಶಾಸ್ತ್ರೀ, ಶ್ರೀಹುರಾವ ಆದವಾನಿ ಮಾತನಾಡಿದರು. ಭಜನಾ ಮಂಡಳಿಯ ರಾಧಾಬಾಯಿ ಕೃಷ್ಣಭಟ್

ಜೋಷಿ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿದುಷಿ ನಿರ್ಮಲಾ ರಾಜಗುರು ದೇವರ ನಾಮ ಹಾಡಿದರು. ಸುರೇಖಾ ಕುಲಕರ್ಣಿ ಹಾಗೂ ನರಸಿಂಹ ಭಂಡಿ ನಿರೂಪಿಸಿದರು. ಉಷಾ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲ್ಪನಾ ಕನಕಗಿರಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!