2024-25 ನೇ ಸಾಲಿನ ಜಗದ್ಗುರು ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವದ ದೇಣಗೆ ಸಂಗ್ರಹ ಹಣ ಎಣಿಕೆ ಕಾರ್ಯ ಆರಂಭ…
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸುಕ್ಷೇತ್ರ ದಕ್ಷಿಣ ಕಾಶಿ ತಿಂಥಣಿಯ ಶ್ರೀ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಭಕ್ತರಿಂದ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣ ಎಣಿಕೆ ಕಾರ್ಯ ದೇವಸ್ಥಾನದ ಆವರಣದಲ್ಲಿ ಇಂದು ಸುರಪುರ ತಹಸೀಲ್ದಾರ ಎಚ್.ಎ.ಸರಕಾವಸ್ ಕಕ್ಕೇರಾ ಉಪ ತಹಸೀಲ್ದಾರ & ದೇವಸ್ಥಾನ ಶಿರಸ್ತೇದಾರ ರೇವಪ್ಪ ತೆಗ್ಗಿನಮನಿ ನೇತೃತ್ವದಲ್ಲಿ ಆರಂಭವಾಗಿದೆ.


ಸುರಪುರ ತಾಲೂಕಿನ ಕೆಂಭಾವಿ,ಕಕ್ಕೇರಾ,ಹೋಬಳಿ ಉಪ ತಹಸೀಲ್ದಾರರು ಹಾಗೂ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ,ಗ್ರಾಮ ಸಹಾಯಕರು, ದೇವಸ್ಥಾನ ವ್ಯವಸ್ಥಾಪನ ಸೇವಾ ಸಮಿತಿ ಅಧ್ಯಕ್ಷ ವೆಂಕಟೇಶ ಯರಡೋಣಿ ಹಾಗೂ ಸದಸ್ಯರಾದ ಮೌನೇಶ ಆರ್ ಭೋಯಿ, ಸಮ್ಮುಖದಲ್ಲಿ ದೇಣಿಗೆ ಸಂಗ್ರಹದ ಹಣ ಎಣಿಕೆ ಬೆಳಿಗ್ಗೆಯಿಂದಲೆ ಭರದಿಂದ ಸಾಗಿತು.
ಈ ಸಂದರ್ಭದಲ್ಲಿ ಸುರಪುರ ಕಂದಾಯ ಇಲಾಖೆ ಶಿರಸ್ತೆದಾರ್ ಬಸವರಾಜ ಪಾಟೀಲ್, ಕೆಂಭಾವಿ ಉಪ ತಹಸೀಲ್ದಾರ ಪ್ರವೀಣ್ ಸಜ್ಜನ್, ಪ್ರಥಮ ದರ್ಜೆ ಸಹಾಯಕ ವಿನೋದ್ ಬಾಸ್ಪಲ್ಲಿ, ದೇವಸ್ಥಾನ ವ್ಯವಸ್ಥಾಪಕ ಶಿವಾನಂದ ಆರ್ ಮಟ್ ,
ಸುರಪುರ ಕಂದಾಯ ನಿರೀಕ್ಷಕ ಬಸವರಾಜ ಬಿರೇದಾರ್ , ಪ್ರಥಮ ದರ್ಜೆ ಸಹಾಯಕ ಗುರುಬಸಪ್ಪ ಪಾಟೀಲ್, ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು & ಇತರರು ಉಪಸ್ಥಿತರಿದ್ದರು.