ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಧರಿಸಿ ಅವರ ಜೀವ ಕಾಪಾಡಿ; ಸಿದ್ದಣ್ಣ ಯಡ್ರಾಮಿ ಪಿಎಸ್ಐ ಸುರಪೂರ

ಸುರಪುರ ಟೈಮ್ಸ್ ವಾರ್ತೆ

ಸುರಪುರ ;ರಸ್ತೆಯಲ್ಲಿ ಸಂಚರಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅದರಲ್ಲಿ ವಿಶೇಷವಾಗಿ ಅಪಘಾತಗಳಲ್ಲಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಅನ್ನು ಧರಿಸಿ ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಧರಿಸಿ ಅವರ ಜೀವವನ್ನು ಕಾಪಾಡಿಕೋಳಬೇಕು ಎಂದು  ಪಿಎಸ್ಐ ಸುರಪೂರ ಸಿದ್ದಣ್ಣ ಯಡ್ರಾಮಿ ಹೇಳಿದರು .  

ಅವರು  ಇಂದು ನಗರದ ಗಾಂಧಿ ಚೌಕ್ ನಲ್ಲಿ ನೆಡೆದ 9 ತಿಂಗಳಿನಿಂದ ಹಿಡಿದು 4 ವರ್ಷಗಳ ಒಳಗಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಹೊಗುವಾಗ ಮುನ್ನೆಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಸ್ತೆಯಲ್ಲಿ ಸಂಚರಿಸುವಾಗ ಸಂಚಾರಿ ಸೂಚನಾ ಫಲಕಗಳನ್ನು ಆಧರಿಸಿ ವಾಹನವನ್ನು ಚಲಾಯಿಸಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ವಾಹನ ಚಲಾಯಿಸುವಾಗ ಹೆಲ್ಮೆಟ್ ಅನ್ನು ಧರಿಸಿ ಯಾವುದೇ ಕಾರಣಕ್ಕೂ ಅತಿ ವೇಗ ಆಲಕ್ಷತನದಿಂದ ವಾಹನವನ್ನು ಚಲಾಯಿಸಬೇಡಿ ಕುಡಿದು ವಾಹನವನ್ನು ಚಲಾಯಿಸಬೇಡಿ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಯಲ್ಲಿ ವಾಹನವನ್ನು ಕೊಡಬೇಡಿಸಿ ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು. ಸಂದರ್ಭದಲ್ಲಿ ಮಾನಪ್ಪ ಶಾರದಳ್ಳಿ ಎ ಎಸ್ ಐ ಬೀರಪ್ಪ ಏಎಸ್ಐ ಮುಖ್ಯಪೇದೆಗಳಾದ ಶಿವರಾಜ್ ಪಾಣೆಗಾವ್ ಬಸವರಾಜ್ ಮುದುಗಲ್ ಪೊಲೀಸ್ ಪೇದೆಗಳಾದ ಸುರೇಶ್ ಕದಂ. ಹುಸೇನ್ ಬಾಷಾ ಲಕ್ಷ್ಮಣ್ ಹಣಮಂತರಾಯ್. ದಯಾನಂದ್ ಜಮಾದಾರ್ ಮಹಿಳಾಪೇದೆ ಶ್ರೀಮತಿ ಲತಾ ಹಾಗೂ ಸಹಸ್ರಾರು ಸಾರ್ವಜನಿಕರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

Leave a Reply

Your email address will not be published. Required fields are marked *

error: Content is protected !!