ಏಪ್ರೀಲ್ ೧೫ ರವರೆಗೆ ಕಾಲುವೆಗೆ ನೀರು ಹರಿಸಿ ರೈತರ ಹಿತ ಕಾಪಾಡಿ ಶ್ರೀ ಬಸವೇಶ್ವರ ವಿತರಣಾ ನೀರು ಬಳಕೆದಾರ ಸಹಕಾರ ಸಂಘದಿಂದ ಮುಖ್ಯ ಇಂಜೀನಿಯರಗೆ ಮನವಿ
ಸುರಪುರ ಟೈಮ್ಸ್ ವಾರ್ತೆ
ಕೊಡೇಕಲ್:ಎಡದಂಡೆ ಕಾಲುವೆಗೆ ಏಪ್ರೀಲ್ ೧೫ ರವರೆಗೆ ನೀರು ಹರಿಸುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಶ್ರೀ ಬಸವೇಶ್ವರ ವಿತರಣಾ ಕಾಲುವೆಗಳ ನೀರು ಬಳಕೆದಾರ ಸಹಕಾರ ಸಂಘಗಳ ಮಹಾಮಂಡಳದ ಕೊಡೇಕಲ್ ಕೆಬಿಜೆಎನ್‌ಎಲ್ ಉಪವಿಭಾಗದ ವಿತರಣಾ ಕಾಲುವೆಗಳ ನೀರು ಬಳಕೆದಾರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಷಣ್ಮುಖಪ್ಪ ಡೊಣ್ಣಿಗೇರಿ ಹೇಳಿದರು.
ಗುರುವಾರದಂದು ಸಮೀಪದ ನಾರಾಯಣಪುರ ಗ್ರಾಮದ ಕೃಷ್ಣಾ ಭಾಗ್ಯಜಲ ನಿಗಮದ ಮುಖ್ಯ ಇಂಜಿನೀಯರ ಕಚೇರಿಗೆ ತೆರಳಿ ಏಪ್ರೀಲ್ ೧೫ ರ ವರೆಗೆ ಕಾಲುವೆ ನೀರು ಹರಿಸುವಂತೆ ಮುಖ್ಯ ಅಭಿಯಂತರ ಆರ್.ಮಂಜುನಾಥ ಅವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಅವರು ಈಗಾಗಲೆ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಮಾರ್ಚ ೨೩ ರವರೆಗೆ ಮಾತ್ರ ನೀರು ಹರಿಸಲಾಗುವದೆಂದು ತಿಳಿಸಿದ್ದಾರೆ ಆದರೆ ಇದು ರೈತರಿಗೆ ಮಾರಕವಾಗಿ ಪರಣಮಿಸಲಿದೆ, ಕಾಲುವೆಯ ನೀರನ್ನು ನಂಬಿಕೊಂಡು ಹಿಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ್ದಾರೆ ಆದರೆ ರೈತರು ಬೆಳೆದಿರುವ ಬೆಳೆಗಳ ಫಸಲು ಕೈ ಸೇರಬೇಕಾದರೆ ಇನ್ನೂ ಏಪ್ರೀಲ್ ೧೫ ರ ವರಗೆ ಕಾಲುವೆಗೆ ನೀರು ಹರಿಸುವುದು ಅತ್ಯಗತ್ಯವಾಗಿದೆ ಅದಕ್ಕೆ ಅಧಿಕಾರಿಗಳು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಕಷ್ಟವನ್ನು ಮುಖ್ಯಮಂತ್ರಿಗಳು, ನೀರಾವರಿ ಮಂತ್ರಿಗಳು, ಸಲಹ ಸಮೀತಿ ಅಧ್ಯಕ್ಷರು ಹಾಗೂ ನಿಗಮದ ಎಂ.ಡಿ ಅವರುಗಳ ಗಮನಕ್ಕೆ ತರುವ ಮೂಲಕ ಈ ಹಿಂದಿನ ತಿರ್ಮಾನವನ್ನು ಬದಲಿಸುವ ಮೂಲಕ ಏಪ್ರೀಲ್ ೧೫ ರವರೆಗೆ ನೀರು ಹರಿಸಬೇಕು ಎಂದು ಮನವರಿಕೆ ಮಾಡಿಕೊಡುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಅವರು ತಿಳಿಸಿದರು.
ನೀರು ಬಳಕೆದಾರ ಸಹಕಾರ ಸಂಘದ ಸದಸ್ಯರು ನೀಡಿದ ಮನವಿಯನ್ನು ಸ್ವಿಕರಿಸಿ ಮಾತನಾಡಿದ ಸಿಇ ಆರ್.ಮಂಜುನಾಥ ಮನವಿ ಪತ್ರವನ್ನು ನಿಗಮದ ಮೇಲಾಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಕಾರ‍್ಯದರ್ಶಿಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರ ರಮೆಶ ರಾಠೋಡ್, ಕೊಡೇಕಲ್ ಉಪವಿಬಾಗದ ಎಇ ರಾಜಶೇಖರ ವಂದಲಿ, ಮಹಾಮಂಡಳದ ಕಾರ‍್ಯದರ್ಶಿ ರಾಜೇಸಾಬ ಖಾಜಿ, ಎಂ.ಆರ್.ಖಾಜಿ, ರಮೇಶ ಬಿರಾದಾರ,ಸಂಗನಬಸಪ್ಪ ನವಲಗುಡ್ಡ, ಬಸನಗೌಡ ಮಾಲಿಪಾಟೀಲ,ಮಡಿವಾಳಪ್ಪ ಗಚ್ಚಿನಮನಿ, ಅಂಬ್ರೇಶ ಅಂಗಡಿ, ನೀಲಪ್ಪ ಬಾಚಿಹಾಳ, ಶಿವಪುತ್ರ ಗೆದ್ದಲಮರಿ, ಸೋಮಣ್ಣ ಹವಾಲ್ದಾರ್, ಹಣಮಂತ ಭಂಗಿ, ಹಣಮಂತ ಹಿರೇಕುರುಬರ ಸೇರಿದಂತೆ ಇತರರು ಉಪಸ್ಥಿತರಿದ್ದರು.
