ನರೇಗಾ, ಸ್ವಚ್ಛ ಭಾರತ್ ಮಿಷನ್, ಸಾಹಸ್ ಸಂಸ್ಥೆಯ ಘನತ್ಯಾಜ್ಯ ನಿರ್ವಹಣೆ ಸಮುದಾಯ ಭಾಗಿತ್ವ ಜಾಗೃತಿ ಕಾರ್ಯಕ್ರಮ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕ ಪಂಚಾಯತ ಸುರಪುರ, ಸಾಹಸ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ನಗನೂರ ಇವರ ಸಹಯೋಗದಲ್ಲಿ ಇಂದು ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯ ಸಹಭಾಗಿತ್ವದ ಪಾಲ್ಗೊಳ್ಳುವಿಕೆ ಸಭೆ, ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಇರುವ ನಾನಾ ಸೌಲಭ್ಯಗಳ ಕುರಿತು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಏ.03ರಂದು ನಗನೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಾಹಸ ಸಂಸ್ಥೆಯ ತಾಲೂಕ ಪ್ರತಿನಿಧಿ ರವಿಚಂದ್ರ ಚಟ್ನಳ್ಳಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿ ಮನೆಯಿಂದ ನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ರಸ್ತೆ ಬದಿ, ಚರಂಡಿ, ತಿಪ್ಪೆಗುಂಡಿ ಹಾಗೂ ಎಲ್ಲೆಂದರಲ್ಲಿ ಬಿಸಾಡದೆ ವೈಜ್ಞಾನಿಕವಾಗಿ ಹಸಿ ಕಸ, ಒಣಕಸ ಹಾಗೂ ಅಪಾಯಕಾರಿ ಕಸ ಎಂದು ವಿಂಗಡಿಸಿ ಗ್ರಾಮ ಪಂಚಾಯತಿಯ ಸ್ವಚ್ಛತಾ ವಾಹಿನಿಯೊಂದಿಗೆ ಬರುವ ಸ್ವಚ್ಛತಾ ಸಿಬ್ಬಂದಿಗೆ ನೀಡುವ ಮೂಲಕ ಗ್ರಾಮದ ನೈರ್ಮಲ್ಯ ಕಾಪಾಡಬೇಕು ಎಂದು ತಿಳಿಸಿದರು.
ಈ ವೇಳೆ ನಗನೂರು ಗ್ರಾಮ ಪಂಚಾಯತಿಯ ಕರವಸೂಲಿಗಾರ ಮಾನಪ್ಪ, ಗ್ರಾಮ ಕಾಯಕ ಮಿತ್ರ ಶೇಖಮ್ಮ,ನರೇಗಾ ಯೋಜನೆಯ ಕಾಯಕ ಬಂದುಗಳ ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

