ಬೇಸಿಗೆ ಶಿಬಿರ ಲಾಭ ಪಡೆದುಕೊಳ್ಳಿ; ಶಾಸಕ ಆರ್ವಿಎನ್

ಸುರಪುರ ಟೈಮ್ಸ್ ವಾರ್ತೆ
ಸುರಪುರ:ಮುಕ್ತ ಮನಸ್ಸಿನ ಮಕ್ಕಳಿಗೆ ವೈಜ್ಞಾನಿಕ ಕಲಿಕೆಯ ದೃಷ್ಟಿಯಿಂದ ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ. ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಂಡು ವಿದ್ಯೆ ವೃದ್ಧಿಸಿಕೊಳ್ಳುವತ್ತ ಮಕ್ಕಳು ಗಮನ ಹರಿಸಿ ಇದರ ಲಾಭ ಪಡೆಯಬೇಕೆಂದು ಶಾಸಕ ರಾಜಾ ವೇಣುಗೋಪಾಲ ನಾಯಕ‌ ಹೇಳಿದರು.
ಇಂದು ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಸ್ವಾಮಿ ಪರಾಂಕುಶ ಮಠದ ಆವರಣದಲ್ಲಿ ಶ್ರೀ  ಮಹರ್ಷಿ ವಾಲ್ಮೀಕಿ ಆರ್.ಸಿ. ನಾಯಕ ಜನಸೇವಾ ಶೈಕ್ಷಣಿಕ ಜನಸೇವಾ ಟ್ರಸ್ಟ್ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ನಗರದದಲ್ಲಿ ಶೈಕ್ಷಣಿಕ ಉದ್ದೇಶದಿಂದ ಮಕ್ಕಳಿಗೆ ಉಚಿತ ಬೇಸಿಗೆ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು ಈ ಸಂಸ್ಥೆಯವರು ಶಿಸ್ತು, ಪ್ರಾಮಾಣಿಕತೆ ಹೆಸರಾಗಿದ್ದು ಜೊತೆಗೆ ಅದರಲ್ಲೂ ಉತ್ತಮವಾದ ಬೋಧಕ ಸಿಬ್ಬಂದಿಯನ್ನು ಈ ಟ್ರಸ್ಟ್‌ನಲ್ಲಿ ನೇಮಕ ಮಾಡಿಕೊಂಡು ಮುಕ್ತ ಮನಸ್ಸಿನ ಕಲಿಕೆಗೆ ಹಾಗೂ ಮಕ್ಕಳ ವಿದ್ಯೆಯ ವಿಕಸನಕ್ಕೆ ಬೇಸಿಗೆ ಶಿಬಿರ ಸಹಕಾರಿಯಾಗಲಿ ಎಂದರು. ಕಾರ್ಯಕ್ರಮದಲ್ಲಿ ಕ್ರಿಯೇಶನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿ ದೇಶದ ಆಸ್ತಿಯಾಗಿರುವ ಮುಗ್ಧ ಮಕ್ಕಳು . ಮನರಂಜನೆ ಜತೆ ಕಲಿಕೆಗೂ ಅವಕಾಶವಿರುವ ಶಿಬಿರಗಳನ್ನು ಆಯ್ದುಕೊಂಡರೆ ಉಪಯುಕ್ತ ಎಂಬುದನ್ನು ಪೋಷಕರು ಮರೆಯಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಟ್ರಸ್ಟ್ ಅಧ್ಯಕ್ಷ ಆರ್.ಸಿ.ನಾಯಕ ಮಾತನಾಡಿ ಸುರಪುರ ಪಟ್ಟಣದಲ್ಲಿ ಶೈಕ್ಷಣಿಕ ಉದ್ದೇಶದಿಂದ ಮಕ್ಕಳಿಗೆ ಉಚಿತ ಬೇಸಿಗೆ ತರಬೇತಿ ಶಿಬಿರ ಪ್ರಾರಂಭಗೊಳ್ಳುತ್ತಿರುವುದು ಹೆಮ್ಮೆಯ ವಿಷಯ ಅಲ್ಲದೆ ಈ ಟ್ರಸ್ಟ್‌ನ ಬೋಧಕರ ಸಿಬ್ಬಂಧಿಯ ಕಟ್ಟಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗುವುದು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲು ಈ ಟ್ರಸ್ಟಿನ ಮುಖ್ಯ ಉದ್ದೇಶವಾಗಿದೆ ಎಂದರು . ಕಾರ್ಯಕ್ರಮದಲ್ಲಿ ಟ್ರಸ್ಟಿನ ಗೌರವ ಅಧ್ಯಕ್ಷ ರಾಜಾ ಸುಭಾಶ್ಚಂದ್ರ ನಾಯಕ, ರಾಜಕೀಯ ಮುಖಂಡರಾದ ರಾಜಾ ಸುಶಾಂಕ ನಾಯಕ, ಮಲ್ಲಣ್ಣ ಸಾಹುಕಾರ, ಹುಲಗಪ್ಪ ಪೂಜಾರಿ, ಚವ್ಹಾಲಕ್ಷ್ಮೀ, ತಿಮ್ಮಣ್ಣ ದೇವಿಕೇರಾ ಗ್ರಾ.ಪಂ.ಅಧ್ಯಕ್ಷರು, ರಾಜಾ ದೇವರಾಜ ನಾಯಕ, ರಾಜಾ ಉಡಚಪ್ಪ ನಾಯಕ ಹಾಗೂ ಬೋಧಕರಾದ ಸಾಯಬಣ್ಣ, ಸಹನಾ, ಭಾಗ್ಯಶ್ರೀ, ಸೌಮ್ಯ, ಆದರ್ಶ ಹಾಗೂ ಟ್ರಸ್ಟಿನ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪೋಟೊ: ಉಚಿತ ಬೇಸಿಗೆ ಶಿಬಿರವನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿದರು
ಪೋಟೊ: ಬೇಸಿಗೆ ಶಿಬಿರದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡುತ್ತಿರುವುದು.

Leave a Reply

Your email address will not be published. Required fields are marked *

error: Content is protected !!