ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಶಾಸಕ ಆರ್ವಿಎನ್

ಸುರಪುರ ಟೈಮ್ಸ್ ವಾರ್ತೆ
ಸುರಪುರ :ಬೇಸಿಗೆ ಪ್ರಾರಂಭವಾಗಿದ್ದು ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ತಾಲೂಕ ಮಟ್ಟದ ಅಧಿಕಾರಿಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕುಡಿಯುವ ನೀರಿನ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಈಗಾಗಲೇ ಬಿಸಿಲಿನ ತಾಪ ಹೆಚ್ಚಾಗಿದೆ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆಯಾಗಬಾರದು. ಕೆಲ ಹಳ್ಳಿಗಳಲ್ಲಿ ಕಳೆದ ವರ್ಷ ಕುಡಿಯುವ ನೀರಿನ ಉಲ್ಬಣ ಉಂಟಾಗಿತ್ತು. ಅಂತಹ ಗ್ರಾಮಗಳಿಗೆ ಹಚ್ಚಿನ ಮೂತುವರ್ಜಿ ವಹಿಸುವಂತೆ ಹೇಳಿದರು.ಇನ್ನೂ ಹುಣಸಗಿ ತಾಲೂಕಿನ ಅಮಲಿಹಾಳ, ಅಗ್ನಿ, ಕರಿಬಾವಿ ಗ್ರಾಮಗಳಲ್ಲಿ ನೀರಿನ ಸಮಸ್ಸೆ ಇದೆ ಆ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಜೆಸ್ಕಾಂ ಅಧಿಕಾರಿಗಳು ಸಹ ಕುಡಿಯುವ ನೀರಿಗೆ ಸಮಸ್ಯೆಯಾಗಂದೆ ನೋಡಿಕೋಳಬೇಕು ಎಂದರು. ದನ ಕರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆ ,ಸಾರ್ವಜನಿಕರಿಗೆ ಬೇಸಿಗೆ ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ಪಡೆದರು. ಒಟ್ಟಾರೆಯಾಗಿ ಬೇಸಿಗೆ ಸಮಯದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ತಹಸೀಲ್ದಾರ್ ಹೆಚ್.ಎ.ಸರಕಾವಸ್, ಸುರಪುರ ತಾಪಂ ಇಒ ಬಸವರಾಜ ಸಜ್ಜನ್, ಹುಣಸಗಿ ತಾಪಂ ಇಒ ಬಸಣ್ಣ ನಾಯಕ, ತಾಲೂಕು ಅರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ. ಎಚ್.ಡಿ.ಪಾಟೀಲ್, ಪಶು ಸಂಗೋಪನಾ ಇಲಾಖೆ ಎಡಿ ಡಾ.ಸುರೇಶ ಹಚ್ಚಡ, ಸಹಾಯಕ ಕೃಷಿ ನಿರ್ದೇಶಕ ಡಾ.ಭೀಮರಾಯ ನಾಯಕ ಹವಲ್ದಾರ್, ನಗರಸಭೆ ಎಇ ಮಹೇಶ, ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ ಮೌನೇಶ ದೇವರಗೋನಾಲ, ಹುಣಸಗಿ ಜೆಸ್ಕಾಂ ಎಇಇ ಕಳಕಪ್ಪ ಬಂಡಿ ಸಭೆಗೆ ಮಾಹಿತಿ ಒದಗಿಸಿದರು. ಗ್ರೇಡ್-೨ ತಹಸೀಲ್ದಾರ್ ಮಲ್ಲಯ್ಯ ದಂಡು, ಉಪ ತಹಸೀಲ್ದಾರ್ ರೇವಪ್ಪ, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಮಲ್ಲಕಾಜಪ್ಪ ಎಫ್‌ಡಿಎ ಅಶೋಕ ಕುಮಾರ ಸೊನ್ನದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಫೋಟೊ :ಸುರಪುರ ತಹಸಿಲ್‌ನಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಕುಡಿಯುವ ನೀರಿನ ಸಭೆ ನಡೆಸಿದರು. ತಹಸೀಲ್ದಾರ್ ಹೆಚ್.ಎ.ಸರಕಾವಸ್, ಬಸವರಾಜ ಸಜ್ಜನ್ ಬಸಣ್ಣ  ನಾಯಕ ಇದ್ದರು. 
ಫೋಟೊ :ಸುರಪುರ ತಹಸಿಲ್‌ನಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಕುಡಿಯುವ ನೀರಿನ ಸಭೆಯಲ್ಲಿ ಹುಣಸಗಿ ಮತ್ತು ಸುರಪುರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವುದು

Leave a Reply

Your email address will not be published. Required fields are marked *

error: Content is protected !!